ಮುಂಬೈ: ಲೈಂಗಿಕ ಕಿರುಕುಳ ವಿರುದ್ಧ ಧ್ವನಿ ಎತ್ತಿದ ನಟಿ ಮನೆಯ ಮೇಲೆ ಕಲ್ಲು ತೂರಾಟ

ಸೋಮವಾರ, 30 ಮಾರ್ಚ್ 2015 (14:04 IST)
ರೌಡಿಗಳ ಅಸಭ್ಯ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ, ಆಕ್ರೋಶಗೊಂಡ ಕೆಲ ಪುಡಿರೌಡಿಗಳು ಮೂರನೇ ಅಂತಸ್ತಿನಲ್ಲಿದ್ದ ಮಹಿಳೆಯ ಮನೆಗೆ ನುಗ್ಗಿ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.

ವೆರ್ಸೋವಾ ಪ್ರದೇಶದ ಅಪಾರ್ಟ್‌ಮೆಂಟ್‌ನ ಮೂರನೇ ಅಂತಸ್ತಿನಲ್ಲಿ ವಾಸಿಸುತ್ತಿರುವ ಮಹಿಳೆಯ ಮನೆಯ ಕಿಟಕಿಯಿಂದ ಒಳಕ್ಕೆ ನುಗ್ಗಿ ರೌಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಮನೆಯಲ್ಲಿದ್ದ ಇಬ್ಬರಿಗೆ ತೀವ್ರ ತೆರನಾದ ಗಾಯಗಳಾಗಿವೆ. ಒಬ್ಬರ ತೆಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವರ್ಸೋವಾ (ಅಂಧೇರಿ ಪಶ್ಚಿಮ) ಯಾರಿ ರಸ್ತೆಯಲ್ಲಿರುವ ಮಾರಿಯಾ ಅಪಾರ್ಟ್‌ಮೆಂಟ್‌ನ ಮೂರನೇ ಅಂತಸ್ತಿನಲ್ಲಿ ವಾಸವಾಗಿರುವ ಮಹಿಳೆ, ಟೆಲಿವಿಜನ್ ಮತ್ತು ರಿಯಲ್ಟಿ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಆರೋಪಿಗಳು ಪ್ರತಿದಿನ ಕೀಟಳೆ ಕೊಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆಗೆ ಆರೋಪಿಗಳ ವಿರುದ್ಧ ದೂರು ನೀಡಿದ್ದಳು.

ಇದೀಗ ಪೊಲೀಸರು ಆರೋಪಿಗಳು ವಿರುದ್ಧ ಹತ್ಯಾಯತ್ನ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ