ಮುಂಬೈ : ಇಸ್ರೇಲ್-ಗಾಜಾ ವಿವಾದ: ಕೋಕಾಕೋಲಾ, ಪೆಪ್ಸಿಗೆ ನಿಷೇಧ ಹೇರಿದ ಮುಸ್ಲಿಮರು

ಶನಿವಾರ, 26 ಜುಲೈ 2014 (14:01 IST)
ಇಸ್ರೇಲ್ -ಗಾಜಾ ಬಿಕ್ಕಟ್ಟು ಪ್ರತಿಭಟಿಸಿ ಮುಸ್ಲಿಮರು ಕೋಲ್ಡ್‌ಢ್ರಿಂಕ್ಸ್‌ ಕುಡಿಯುವುದಕ್ಕೆ ನಿಷೇಧಿಸಿ ಹೇರಿದ ಘಟನೆ ವರದಿಯಾಗಿದೆ. 
 
ಮಾಧ್ಯಮ ವರದಿಗಳ ಪ್ರಕಾರ, ಮುಸ್ಲಿಮರ ಪ್ರಾಬಲ್ಯವಿರುವ ಭೆಂಡಿ ಬಜಾರ್‌ನಲ್ಲಿ ನಿಷೇಧ ಹೇರಿದ ವಸ್ತುಗಳ ಪಟ್ಟಿಯನ್ನು ಗೋಡೆಗಳ ಮೇಲೆ ಲಗತ್ತಿಸಲಾಗಿದೆ. ಅದೇ ಪ್ರದೇಶದಲ್ಲಿರುವ ಶಾಲಿಮಾರ್ ಹೋಟೆಲ್‌ನಲ್ಲಿ ಕೋಕ್ ಮತ್ತು ಪೆಪ್ಸಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.   
 
ಅಚ್ಚರಿಯ ವಿಷಯವೆಂದರೆ, ಕೋಕ್ ಅಥವಾ ಪೆಪ್ಸಿ ಕೋಲ್ಡ್‌ಡ್ರಿಂಕ್ಸ್‌ಗಳು ಇಸ್ರೇಲ್ ಮೂಲದ ಕಂಪೆನಿಗಳಲ್ಲ. ಎರಡು ಕಂಪೆನಿಗಳು ಅಮೆರಿಕ ಮೂಲದ್ದಾಗಿವೆ. ಆದರೆ, ಇಸ್ರೇಲ್-ಗಾಜಾ ಬಿಕ್ಕಟ್ಟು ಪರಿಹರಿಸಲು ಅಮೆರಿಕ ಆಸಕ್ತಿ ತೋರಿಸುತ್ತಿಲ್ಲವಾದ್ದರಿಂದ ಆ ದೇಶದ ಉತ್ಪನ್ನಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಕೆಲ ಮುಸ್ಲಿಂ ಮುಖಂಡರ ಅಭಿಪ್ರಾಯವಾಗಿದೆ.
 
ಮುಸ್ಲಿಮರ ನಿಷೇಧ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೋಕಾಕೋಲಾ ವಕ್ತಾರ, ಅಮೆರಿಕ ಯಾವುದೇ ದೇಶದ ಪರವಾಗಿ ವಾದಿಸುತ್ತಿಲ್ಲ. ವಿಶ್ವವು ಸೇರಿದಂತೆ ಪಶ್ಚಿಮ ಏಷ್ಯಾದಲ್ಲಿ ಕೂಡಾ ಅಮೆರಿಕ ಶಾಂತಿ ಬಯಸುತ್ತದೆ ಎಂದು ತಿಳಿಸಿದ್ದಾರೆ.
 
 
 
 

ವೆಬ್ದುನಿಯಾವನ್ನು ಓದಿ