ಮುಂಬೈ ಕಿಂಗ್ ಸರ್ಕಲ್ ಗಣಪತಿ ಮೂರ್ತಿಗೆ ಪ್ರತಿದಿನಕ್ಕೆ 51 ಕೋಟಿ ರೂ ವಿಮೆ

ಮಂಗಳವಾರ, 26 ಆಗಸ್ಟ್ 2014 (18:30 IST)
ಲಾಲ್‌ಬೌಗ್ಚಾ ರಾಜಾ ಎಂದು ಎಂದು ಸುಪ್ರಸಿದ್ಧವಾಗಿರುವ  ಜಿಎಸ್‌ಬಿ ಸೇವಾ ಮಂಡಲದ ಬೃಹತ್ ಗಣಪತಿ ವಿಗ್ರಹಕ್ಕೆ ರೂ 259 ಕೋಟಿ  ಮೊತ್ತದ ಭಾರಿ ವಿಮೆ ಮಾಡಿಸಲಾಗಿದೆ. 

ಮಂಡಳಿಯ ಈ ವಿಗ್ರಹಕ್ಕೆ ಕಳೆದ ವರ್ಷ, ರೂಪಾಯಿ 223 ಕೋಟಿ ವಿಮೆ ಮಾಡಲಾಗಿತ್ತು. 
 
5 ದಿನಗಳ ಕಾಲ ಮೂರ್ತಿಯನ್ನು  ಪೂಜಿಸಲಾಗುತ್ತಿದ್ದು, ಪ್ರತಿದಿನದ ಲೆಕ್ಕಾಚಾರದಲ್ಲಿ ದಿನವೊಂದರ ವಿಮೆ  51. 7 ಕೋಟಿ ರೂ. ಎಂದು ವರದಿಯಾಗಿದೆ. ಈ ಮೂರ್ತಿಗೆ 22 ಕೋಟಿ ರೂಪಾಯಿಯ ಚಿನ್ನದಿಂದ ಅಲಂಕರಿಸಲಾಗುವುದು.
 
ಜಿಎಸ್‌ಬಿ  ಸೇವಾ ಮಂಡಲದ ಗಣಪತಿ ವಿಗ್ರಹ,ಮಂಟಪ, ಬಂಗಾರ ಮತ್ತು ಭಕ್ತರನ್ನು  ಬೆಂಕಿ, ಭಯೋತ್ಪಾದಕ ದಾಳಿ, ಗಲಭೆಗಳಂತಹ ಅಪಾಯಗಳಿಂದ ರಕ್ಷಿಸಲು ಈ ವಿಮೆಯನ್ನು ಮಾಡಿಸಲಾಗಿದೆ. 
 
ಹಿಂದುಗಳ ಆರಾಧ್ಯ ದೈವ ವಿನಾಯಕ, ಆನೆಮುಖವನ್ನು ಪಡೆದು ಮರುಜನ್ಮ ಹೊಂದಿದ  ಶುಭದಿನದ ಆಚರಣೆಯಾದ ಗಣೇಶ ಚತುರ್ಥಿಯನ್ನು ದೇಶಾದ್ಯಂತ ಬರುವ ಶುಕ್ರವಾರದಿಂದ ಆಚರಿಸಲಾಗುತ್ತಿದ್ದು, ಕೆಲವೆಡೆ 10 ದಿನಗಳಿಂದ 21 ದಿನಗಳ ಕಾಲ ಕೂಡ ಹಬ್ಬವನ್ನು ಆಚರಿಸಲಾಗುತ್ತದೆ. 
 
ಕೊನೆಯ ದಿನ ಮೂರ್ತಿಯನ್ನು ಹಾಡು,ನೃತ್ಯ ಸಮೇತವಾದ ವೈಭವಯುತವಾದ ಮೆರವಣಿಗೆ ಮೂಲಕ ಕೊಂಡೊಯ್ದು ನದಿ ಅಥವಾ ಸಮುದ್ರಗಳಲ್ಲಿ ಮುಳುಗಿಸಲಾಗುತ್ತದೆ. 

ವೆಬ್ದುನಿಯಾವನ್ನು ಓದಿ