ಕಾಶ್ಮೀರ ಗಲಭೆ: ಹಿಂದೂ ಪರಿವಾರಕ್ಕೆ ಊಟ ನೀಡಲು ಮೈಲುಗಟ್ಟಲೆ ಪ್ರಯಣಿಸುತ್ತಿರುವ ಮುಸ್ಲಿಂ ದಂಪತಿ

ಮಂಗಳವಾರ, 12 ಜುಲೈ 2016 (17:43 IST)
ಒಂದೆಡೆ ಧರ್ಮದ ಹೆಸರಲ್ಲಿ ಹಿಂಸಾಚಾರ. ಇನ್ನೊಂದೆಡೆ ಸಹಬಾಳ್ವೆಯ ಪಾಠ. ಉಗ್ರನನ್ನು ಕೊಂದ ಹಿನ್ನೆಲೆಯಲ್ಲಿ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿ ಈ ಅಪರೂಪದ ದೃಶ್ಯ ಕಂಡು ಬಂದಿದೆ. ಕರ್ಫ್ಯೂ ಹೇರಿರುವುದರಿಂದ ಖಾಲಿ ಖಾಲಿಯಾಗಿರುವ ಬೀದಿಗಳಲ್ಲಿ ಆ ವ್ಯಕ್ತಿಯೋರ್ವ ಚೀಲವನ್ನು ಹೊತ್ತು ನಡೆಯುತ್ತಾನೆ. ಆತನ ಪತ್ನಿ ಸುತ್ತಲೂ ಭದ್ರತಾ ಗಸ್ತು ತಿರುಗುತ್ತಿರುವವರ ಮೇಲೆ ಕಣ್ಣಿಡುತ್ತ ಗಂಡನನ್ನು ಅನುಸರಿಸುತ್ತಾಳೆ. 
ಅಂತಹ ವಿಷಯ ಪರಿಸ್ಥಿತಿ ನಡುವೆಯೂ ಜುಬೇದಾ ಮತ್ತು ಆಕೆಯ ಪತಿ ಇನ್ನೊಂದು ಕುಟುಂಬದ ಹೊಟ್ಟೆ ತಣಿಸಲು ಜೀವವನ್ನು ಲೆಕ್ಕಿಸದೆ ಪ್ರಯಾಣ ಬೆಳೆಸುತ್ತಿದೆ.
 
ಜುಬೇದಾ ಮತ್ತು ಹಿಂದೂ ಪಂಡಿತ ಮಹಿಳೆಯೋರ್ವರು ಒಂದೇ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದಾರೆ. ಸಾರ್ವಜನಿಕ ಓಡಾಟಕ್ಕೆ ನಿಷೇಧ ಹೇರಿರುವುದರಿಂದ ಪಂಡಿತ ಕುಟುಂಬ ತಿನ್ನಲು ಆಹಾರವಿಲ್ಲದೆ ಪರದಾಡುತ್ತಿದೆ.ಅವರು ಆಹಾರವಿದಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಮಾಹಿತಿ ದೊರೆಯುತ್ತಿದ್ದಂತೆ ಜುಬೇದಾ ತನ್ನ ಪತಿಯ ಜತೆ ಅವರಿಗೆ ನೆರವಾಗಲು ನಡೆದಿದ್ದಾರೆ. 
 
ತಮ್ಮ ಸ್ನೇಹಿತೆಯ ದೊಡ್ಡ ಗುಣಕ್ಕೆ ಕಣ್ಣೀರಾಗುವ ಹಿಂದೂ ಮಹಿಳೆ, ಅಲ್ಲಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಆದರೆ ಜುಬೇದಾ ಪ್ರಾಣವನ್ನು ಲೆಕ್ಕಿಸದೆ ನಮ್ಮ ಸಹಾಯಕ್ಕೆ ಬಂದಿದ್ದಾರೆ. ಮಾನವೀಯತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ ಎಂದು ಪ್ರಶ್ನಿಸುತ್ತಾರೆ. 

ವೆಬ್ದುನಿಯಾವನ್ನು ಓದಿ