ಗ್ಯಾಂಗ್‌ರೇಪ್‌‌ಗೊಳಗಾದ ಪತ್ನಿ: ಎಸ್ಎಂಎಸ್‌ ಮೂಲಕ ತಲಾಕ್ ನೀಡಿದ ಪತಿ

ಶನಿವಾರ, 28 ನವೆಂಬರ್ 2015 (14:59 IST)
ನೆರೆಹೊರೆಯವರಿಂದ ಗ್ಯಾಂಗ್‌ರೇಪ್‌ಗೊಳಗಾದ ಮಹಿಳೆಯೊಬ್ಬಳು ದುಬೈಯಲ್ಲಿರುವ ತನ್ನ ಪತಿಗೆ ಘಟನೆ ವಿವರಿಸಿದಾಗ ಪತಿ ಎಸ್ಎಂಎಸ್ ಮೂಲಕ ಆಕೆಗೆ ತಲಾಕ್ ನೀಡಿರುವ ಘಟನೆ ವರದಿಯಾಗಿದೆ.
 
ದುಬೈಯಲ್ಲಿರುವ ಪತಿ ಎಸ್ಎಂಎಸ್ ಮೂಲಕ ತಲಾಕ್ ನೀಡಿದ್ದರಿಂದ ಪತ್ನಿ ಆಘಾತಗೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. 
 
ಗ್ಯಾಂಗ್‌ರೇಪ್‌ಗೊಳಗಾದ ಮಾಹಿತಿ ಪಡೆದ ನಂತರ ದುಬೈಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾದ ಪತಿ, ಮೂರು ಬಾರಿ ತಲಾಕ್ ಎನ್ನುವ ಎಸ್‌ಎಂಎಸ್ ಸಂದೇಶ ರವಾನಿಸಿದ್ದಾನೆ. ಶರೀಯಾ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಎಂದು ಹೇಳಿದಲ್ಲಿ ವಿಚ್ಚೇದನಕ್ಕೆ ಕಾರಣವಾಗುತ್ತದೆ.
 
ಪತಿಯಿಂದ ಎಸ್ಎಂಎಸ್ ಬಂದ ನಂತರ, ಪತಿಯ ಕುಟುಂಬದವರು ಆಕೆಯನ್ನು ಮನೆಯಿಂದ ಹೊರಹಾಕಿದ್ದಲ್ಲದೇ ನಾಲ್ಕು ವರ್ಷದ ಮಗುವನ್ನು ಕೂಡಾ ತನ್ನಿಂದ ದೂರ ಮಾಡಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.
 
ನಾನು ತುಂಬಾ ಸಂಕಷ್ಟದ ಸ್ಥಿತಿಯಲ್ಲಿದ್ದೇನೆ. ಪತಿ ಸುಲಭವಾಗಿ ನನಗೆ ಡೈವೋರ್ಸ್ ನೀಡಿ ಪಾರಾಗಿದ್ದಾನೆ ಎಂದು ಹೇಳಿದ ಮಹಿಳೆ, ಇದೀಗ ತನ್ನ ಸಾಕು ಪೋಷಕರ ಬಳಿ ವಾಸಿಸುತ್ತಿದ್ದಾಳೆ.
 
ಭಾರತೀಯ ಮುಸ್ಲಿಮರು ಸಾಮಾಜಿಕ ಅಂತರ್ಜಾಲ ತಾಣಗಳಾದ ಸ್ಕೈಪೆ ಮತ್ತು ವಾಟ್ಸಪ್ ಮೂಲಕ ವಿಚ್ಚೇದನ ನೀಡುವ ಘಟನೆಗಳು ಹೆಚ್ಚುತ್ತಿವೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ