ಮುಸ್ಲಿಂ ಎಂದು ಪ್ಲಾಟ್ ನೀಡಲು ನಕಾರ

ಬುಧವಾರ, 27 ಮೇ 2015 (16:00 IST)
ಮುಸ್ಲಿಂ ಧರ್ಮಿಯರೆಂಬ ಕಾರಣಕ್ಕೆ ಯುವತಿಯೊಬ್ಬರಿಗೆ ಪ್ಲಾಟ್ ಒಂದರಲ್ಲಿ ವಾಸಿಸಲು ತಡೆ ಒಡ್ಡಿದ ಬ್ರೋಕರ್ ಒಬ್ಬರು ಬೆದರಿಕೆ ಒಡ್ಡಿ, ದೌರ್ಜನ್ಯ ನಡೆಸಿದ ಪ್ರಕರಣ ಮುಂಬೈನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. 
 
ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಗುಜರಾತ್ ಮೂಲದ ಮಿಸ್ಬಾ ಕ್ವಾದ್ರಿ ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮವೊಂದರಲ್ಲಿ  ಕೆಲಸ ಪಡೆದು ಮುಂಬೈಗೆ ಬಂದ ಆಕೆ ಪ್ಲಾಟ್ ಒಂದರಲ್ಲಿ ವಾಸ ಮಾಡುತ್ತಿದ್ದ ಹುಡುಗಿಯರಿಬ್ಬರನ್ನು ಸಂಪರ್ಕಸಿ ಅವರ ಜತೆ ವಾಸಿಸಲು ಎಲ್ಲ ಸಿದ್ಧತೆಗಳನ್ನು ನಡೆಸಿದ್ದರು. 
 
ಆಕೆ ಅಲ್ಲಿಗೆ ಹೋಗಲು ಕೆಲವೇ ಗಂಟೆಗಳ ಮೊದಲು ಆಕೆಗೆ ಫೋನ್ ಕರೆ ಮಾಡಿದ ಬ್ರೋಕರ್ ಒಬ್ಬ, ನೀವು ಮುಸ್ಲಿಂ ಆದ ಕಾರಣ ಆ ಪ್ಲಾಟ್‌ನಲ್ಲಿ ಪ್ರವೇಶವಿಲ್ಲ ಎಂದಿದ್ದಾನೆ. ಇದು ತಾರ್ಕಿಕವಲ್ಲ ಎಂದು ಆಕೆ ವಾದಿಸಿದಾಗ ಅಲ್ಲಿ ನಿಮಗೇನಾದರೂ ಶೋಷಣೆಯಾದರೆ ಕಟ್ಟಡದ ಮಾಲೀಕ, ಬಿಲ್ಡರ್ ಅಥವಾ ಬ್ರೋಕರ್ ಅವರು ಜವಾಬ್ದಾರರಲ್ಲ ಎಂದು ಆಕ್ಷೇಪಣೆ ಇಲ್ಲವೆಂಬ ಪ್ರಮಾಣಪತ್ರಕ್ಕೆ ಸಹಾಯ ಮಾಡಿ ನೀವು ಹೋಗಬಹುದು ಎಂದು ಆತ ಹೇಳಿದ್ದಾನೆ. ಅದಕ್ಕವರು ಮುಸ್ಲಿ ಧರ್ಮಿಯಳೆಂಬ ಕಾರಣಕ್ಕೆ ಯಾವ ರೀತಿಯ ದೌರ್ಜನ್ಯ ಎದುರಾಗಬಹುದು ಎಂದು ಆಕೆ ಆತನಿಗೆ ಮರು ಪ್ರಶ್ನೆ ಹಾಕಿದ್ದಾಳೆ. 
 
ಬ್ರೋಕರ್ ಮಾತನ್ನು ನಿರ್ಲಕ್ಷಿಸಿ ಆಕೆ ಪ್ಲಾಟ್‌ಗೆ ತೆರಳಿದ್ದಾಳೆ. ಆದರೆ ಅಲ್ಲಿಗೆ ಬಂದ ಆತ ಮಾನಸಿಕ ಕಿರುಕುಳ ನೀಡಿದ್ದಾನೆ ಮತ್ತು ಪ್ಲಾಟ್ ತೆರವುಗೊಳಿಸದಿದ್ದರೆ ನಿನಗೆ ಸಂಬಂಧಿಸಿದ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. 
 
ಅಂತಿಮವಾಗಿ, ಕ್ವಾದ್ರಿ ಮತ್ತು ಅವರ ಇಬ್ಬರು ಪ್ಲಾಟ್‌ಮೇಟ್‌ಗಳು (ಹಿಂದೂ) ಬಲವಂತವಾಗಿ ಮನೆಬಿಟ್ಟು ಹೋಗುವಂತೆ ಮಾಡಲಾಯಿತು. 

ವೆಬ್ದುನಿಯಾವನ್ನು ಓದಿ