ಬಿಗಿ ಜೀನ್ಸ್, ಶಾರ್ಟ್ ಟಾಪ್ಸ್ ನಿಷೇಧಿಸಿದ ಮುಸ್ಲಿಂ ಕಾಲೇಜು

ಸೋಮವಾರ, 29 ಜೂನ್ 2015 (17:15 IST)
ಕೇರಳದ ಕೋಝಿಕ್ಕೋಡ್‌ನ‌ ನಾಡಕ್ಕಾದಲ್ಲಿರುವ ಮಹಿಳಾ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಬಿಗಿಯಾದ ಜೀನ್ಸ್‌, ಚಿಕ್ಕ ಟಾಪ್‌ ಮತ್ತು ಲೆಗ್ಗಿನ್ಸ್ ಧರಿಸಿ ಕಾಲೇಜಿಗೆ ಬರುವುದನ್ನು ನಿಷೇಧಿಸಲಾಗಿದೆ. ಜತೆಗೆ ಮುಸ್ಲಿಮ್‌ ವಿದ್ಯಾರ್ಥಿನಿಯರಿಗೆ ಮುಖ ಮುಚ್ಚುವಂತಹ ನಖಾಬ್‌ ಧರಿಸಲು ಅವಕಾಶ ಕಲ್ಪಿಸಿದೆ.

'ಮುಸ್ಲಿಂ ಎಜುಕೇಶನಲ್‌ ಸೊಸೈಟಿಯ ಅಡಿಯಲ್ಲಿರುವ ಈ ಕಾಲೇಜಿನಲ್ಲಿ ಜುಲೈ 8ರಂದು ಪ್ರಥಮ ವರ್ಷದ ತರಗತಿಗಳು  ಪ್ರಾರಂಭವಾಗಲಿದ್ದು, ಅಂದಿನಿಂದಲೇ ಈ ಹೊಸ ನಿಯಮ ಜಾರಿಗೆ ಬರುತ್ತದೆ', ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ. 
 
"ಹೊಸ ನಿಯಮದ ಪ್ರಕಾರ ವಿದ್ಯಾರ್ಥಿನಿಯರು ಸಲ್ವಾರ್‌, ಚೂಡಿದಾರ್‌ ಮತ್ತು  ಓವರ್ ಕೋಟ್‌ನ್ನು ಮಾತ್ರ ಧರಿಸಬೇಕು. ಮುಸ್ಲಿಮ್‌ ವಿದ್ಯಾರ್ಥಿನಿಯರು ಕಡು ಬೂದು ಮಫ್ತಾ ಅಥವಾ ತಲೆಗೆ ಸ್ಕಾರ್ಫ್ ಬಳಸಬಹುದು". 
 
"ಕೆಲವು ವಿದ್ಯಾರ್ಥಿನಿಯರು ಬಿಗಿಯಾದ ಜೀನ್ಸ್, ಸಣ್ಣ ಟಾಪ್ ಮತ್ತು ಲೆಗ್ಗಿನ್ಸ್ ಧರಿಸಿಕೊಂಡು ಬರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ", ಎಂದು ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಬಿ ಸೀತಾಲಕ್ಷ್ಮಿ ಹೇಳಿದ್ದಾರೆ.
 
ಕಾಲೇಜಿನಲ್ಲಿ ಓದುತ್ತಿರುವ 40% ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು, ಅವರ ಪೋಷಕರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಪರಿಚಯಿಸುತ್ತಿರುವ ಕಾಲೇಜಿನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ