ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಬಲವಂತವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು : ಸಾಧ್ವಿ

ಭಾನುವಾರ, 12 ಏಪ್ರಿಲ್ 2015 (17:20 IST)
ದೇಶದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಜನಸಂಖ್ಯೆ ಅತಿ ವೇಗವಾಗಿ ಹೆಚ್ಚುತ್ತಿರುವುದು ಹಿಂದೂ ಸಮಾಜದ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್‌ರ ಜನಸಂಖ್ಯೆಯಲ್ಲಾಗುತ್ತಿರುವ ಏರಿಕೆಯನ್ನು ನಿಯಂತ್ರಿಸಲು ಅವರನ್ನು ಬಲವಂತವಾಗಿ ಸಂತಾನಹರಣ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳುವುದರ ಮೂಲಕ ಅಖಿಲ ಭಾರತ ಹಿಂದೂ ಮಹಾಸಭಾದ ಉಪಾಧ್ಯಕ್ಷೆ ಸಾಧ್ವಿ ದೇವಾ ಠಾಕೂರ್ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. 

"ವರ್ಷಗಳು ಕಳೆದಂತೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಸಂಖ್ಯೆ ವಿಪರೀತ ಎನ್ನುವಷ್ಟು ಏರಿಕೆಯಾಗುತ್ತಿದೆ.ಇದು ಹಿಂದೂ ಸಮಾಜಕ್ಕೆ ಮಾರಕವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಸಮುದಾಯದವರಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ತುರ್ತು ಕ್ರಮ ಕೈಗೊಳ್ಳಬೇಕು. ಈ ಮೂಲಕ ಅವರ ಜನಸಂಖ್ಯೆಯಲ್ಲಿ ತೀವೃಗತಿಯ ಬೆಳವಣಿಗೆಯಾಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಸಾಧ್ವಿ ಆಗ್ರಹಿಸಿದ್ದಾರೆ. 
 
ಇಷ್ಟೇ ಅಲ್ಲದೇ ಹಿಂದೂಗಳು  ಹೆಚ್ಚು ಮಕ್ಕಳನ್ನು ಹಡೆಯುವುದರ ಮೂಲಕ ತಮ್ಮ ಜನಸಂಖ್ಯೆಯನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. 
 
ಜತೆಗೆ ಮಸೀದಿ ಮತ್ತು ಚರ್ಚ್‌ಗಳಲ್ಲಿ ಹಿಂದೂ ದೇವರುಗಳನ್ನು ಪೂಜಿಸಬೇಕು ಎಂದಿರುವ ಅವರು ಹರಿಯಾಣದಲ್ಲಿ ನಾಥೂರಾಮ್ ಗೋಡ್ಸೆ ಪ್ರತಿಮೆ ನಿರ್ಮಾಣ ನಡೆಯುತ್ತಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 
 
ಠಾಕೂರ್ ಅವರ ಈ ಹೇಳಿಕೆಗಳಿಗೆ ತೀವೃ ಖಂಡನೆ ವ್ಯಕ್ತವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ