ಶಾಲಾ ಬಾಲಕಿ ರೇಪ್ ಕೇಸ್: ವಿಬ್ ಗಯಾರ್ ಶಾಲೆಯಲ್ಲಿಯೇ ಓದುತ್ತಿರುವ ಮುಸ್ತಫಾನ 5 ವರ್ಷದ ಮಗಳು

ಶುಕ್ರವಾರ, 1 ಆಗಸ್ಟ್ 2014 (11:56 IST)
ದೇಶಾದ್ಯಂತ ತೀವೃ ಖಂಡನೆಗೊಳಗಾಗಿರುವ  ನಗರದ ಮಾರತಹಳ್ಳಿಯ ವಿಬ್ ಗಯಾರ್ ಶಾಲೆಯ 6 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿ ಬಂಧನಕ್ಕೊಳಕ್ಕಾಗಿದ್ದ ದೈಹಿಕ ಶಿಕ್ಷಕ ಮುಸ್ತಫಾನ 5 ವರ್ಷದ ಮಗಳು ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ವಿಬ್ ಗಯಾರ್ ಶಾಲೆಯ ಯುಕೆಜಿ ವಿದ್ಯಾರ್ಥಿನಿ. 

"ಶಾಲೆ ಪುನರಾರಂಭವಾಗಿದ್ದರೂ ನಾವಾಕೆಯನ್ನು ಶಾಲೆಗೆ ಕಳುಹಿಸುತ್ತಿಲ್ಲ.  ಆಕೆ ಮನೆಯಲ್ಲಿಯೇ ಇದ್ದಾಳೆ.  ಆಕೆ ಯಾವಾಗಲೂ ಅಪ್ಪನ ಬಗ್ಗೆಯೇ ಕೇಳುತ್ತಿರುತ್ತಾಳೆ. ಅಪ್ಪ ಸ್ಕೇಟಿಂಗ್ ತರಬೇತಿ ನೀಡಲು ಹೋಗಿದ್ದಾರೆ ಎಂದು ನಾವಾಕೆಗೆ ಸುಳ್ಳು ಹೇಳುತ್ತಿದ್ದೇವೆ.  ತಂದೆಯನ್ನು ಬಿಟ್ಟಿರಲಾಗದೇ ಆಕೆ ಅಳುತ್ತಿದ್ದಾಳೆ. ಹೀಗೆ ಎಷ್ಟು ದಿನಗಳ ಕಾಲ ಆಕೆಗೆ ಸುಳ್ಳು ಹೇಳಿ ಸಂಭಾಳಿಸುವುದು ಎಂದು ತಿಳಿಯುತ್ತಿಲ್ಲ" ಎನ್ನುತ್ತಾರೆ ಆಕೆಯ ತಾಯಿ ಆಯೇಷಾ. ಈ ಪ್ರಕರಣದಲ್ಲಿ ಮುಸ್ತಫಾರದ್ದು ಪರೋಕ್ಷ ಪಾತ್ರವಿದೆ. ಮಗುವಿನ ಮೇಲೆ ರೇಪ್ ನಡೆಸಿದವರು ಅವರಲ್ಲ  ಎಂದು ಹೇಳಲಾಗುತ್ತಿದೆ. 
 
ಮಾಧ್ಯಮಗಳಲ್ಲಿ ತನ್ನ ಪತಿಯ ಬಗ್ಗೆ ತೋರಿಸಲಾದ ದೋಷಾರೋಪಣೆ ವರದಿಯಿಂದ ಕುಟುಂಬ ತೀವೃ ನೊಂದಿದೆ. ಪ್ರತಿಯೊಬ್ಬರು ಖಿನ್ನರಾಗಿದ್ದೇವೆ. ರಮಜಾನ್ ಹಬ್ಬವನ್ನು ಕೂಡ ನಾವು ಸಂತೋಷದಿಂದ, ವಿಜೃಂಭಣೆಯಿಂದ ಆಚರಿಸಿಲ್ಲ ಎನ್ನುತ್ತಾರೆ ಆಯೇಷಾ. 
 
"ನಮ್ಮ ತಮ್ಮ ಈಗ ಎಲ್ಲಿದ್ದಾನೆ. ಅವನಿನ್ನೂ ಯಾಕೆ ಮನೆಗೆ ಬಂದಿಲ್ಲ. ನಮ್ಮ ಅಪ್ಪ, ಅಮ್ಮ ತೀವೃ ಆಖಾತಕ್ಕೆ ಒಳಗಾಗಿದ್ದಾರೆ. ಪೋಲಿಸರ ತಪ್ಪಿನಿಂದಾಗಿ ಆತನ ಹೆಸರಿಗೆ ಸರಪಡಿಸದಷ್ಟು ಕಳಂಕ ಬಡಿದಿದೆ.  ಆಗ ಆತನೇ ತಪ್ಪಿತಸ್ಥನೆಂದ ಪೋಲಿಸರು ಈಗ ಆ ಕುಕೃತ್ಯವನ್ನು ಆತ ಎಸೆದಿಲ್ಲ ಎನ್ನುತ್ತಿದ್ದಾರೆ" ಎಂದು ಕಣ್ತುಂಬಿಸಿಕೊಳ್ಳುತ್ತಾರೆ ಮುಸ್ತಫಾನ ಅಕ್ಕ. 
 
ಮುಸ್ತಫಾನನ್ನು ಅವನ ಕುಟುಂಬ ಕೊನೆಯದಾಗಿ ನೋಡಿದ್ದು ಜುಲೈ 17 ರಂದು. "ನನ್ನ ಮಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ನಾವು ಆಕೆಯನ್ನು ಬೇರೆ ಶಾಲೆಗೆ ಸೇರಿಸಬೇಕಿದೆ. ಆದರೆ ನನ್ನ ಗಂಡ ಮರಳಿದ ಮೇಲೆ ಯಾರು ಆತನನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.  ನಮ್ಮ ಕುಟುಂಬ ನಿರ್ವಹಣೆಯನ್ನು ಅವರು ಹೇಗೆ ಮಾಡುತ್ತಾರೆ. ಈ ಮೊದಲು  ನನ್ನ ಗಂಡ  ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಹುಡುಗಿಯರ ಜತೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಆತನನ್ನು ಕೆಲಸದಿಂದ ಆತನನ್ನು ಕಿತ್ತೆಸೆದರು ಎಂದು ಕೂಡ ವರದಿಯಾಗಿದೆ. ಇದು ಶುದ್ಧ ಸುಳ್ಳು.  ಅಲ್ಲಿ ಅವರಿಗೆ ಕೆಲಸದ ಭಾರ ಹೆಚ್ಚಿತ್ತು ಮತ್ತು ಸಂಬಳವನ್ನು ಸರಿಯಾಗಿ ಕೊಡುತ್ತಿರಲಿಲ್ಲ ಎಂದು ಅವರು ಕೆಲಸ ಬಿಟ್ಟಿದ್ದರು" ಎಂದ ತಮ್ಮ ನೋವು ತೋಡಿಕೊಳ್ಳುತ್ತಾರೆ ಆಯೇಷಾ. 
 
ಮುಸ್ತಫಾ  ಕುಟುಂಬ ಬಾಡಿಗೆಗಿರುವ ಮನೆಯ ಮಾಲೀಕರು ಕೂಡ ಮುಸ್ತಫಾ ತುಂಬ ಒಳ್ಳೆಯ ಮನಸ್ಸಿನ ವ್ಯಕ್ತಿ ಎಂದು ಹೇಳುತ್ತಾರೆ. ಕಳೆದ 7 ವರ್ಷಗಳಿಂದ ತಮ್ಮ ಕಟ್ಟಡದಲ್ಲಿ ಬಾಡಿಗೆಗಿರುವ ಮುಸ್ತಫಾನಲ್ಲಿ ಪ್ರೀತಿಸುವ ಅಪ್ಪ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಕಂಡಿದ್ದೇನೆ. ಆತನಿಗೆ ಬೇಗ ನ್ಯಾಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ ಮಾಲೀಕ ಮೊಹಮ್ಮದ್ ಗೌಸ್. 

ವೆಬ್ದುನಿಯಾವನ್ನು ಓದಿ