15ತಿಂಗಳ ಅಧಿಕಾರವಧಿ ಆತ್ಮವಿಶ್ವಾಸ ತುಂಬಿದೆ: ಪ್ರಧಾನಿ ಮೋದಿ

ಶನಿವಾರ, 5 ಸೆಪ್ಟಂಬರ್ 2015 (15:41 IST)
ಆರೆಸ್ಸೆಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಕಳೆದ 15 ತಿಂಗಳ ಅಧಿಕಾರವಧಿ ತುಬಾ ಆತ್ಮವಿಶ್ವಾಸ ತಂದುಕೊಟ್ಟಿದೆ. ಮುಂಬರುವ ದಿನಗಳಲ್ಲಿ ಉತ್ತಮ ಅಡಳಿತ ನೀಡಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ. 
 
ದೇಶದಲ್ಲಿರುವ ಪ್ರತಿಯೊಬ್ಬ ಜನವಾಮಾನ್ಯನಿಗೆ ಕೇಂದ್ರ ಸರಕಾರದ ಸೌಲಭ್ಯಗಳು ದೊರೆಯಬೇಕು ಎನ್ನುವುದೇ ಕೇಂದ್ರ ಸರಕಾರದ ಆಶಯವಾಗಿದೆ ಎಂದು ತಿಳಿಸಿದ್ದಾರೆ.
 
ಆರೆಸ್ಸೆಸ್ ಮತ್ತು ಕೇಂದ್ರ ಸರಕಾರದ ಮಧ್ಯದ ಸಮನ್ವಯ ಸಮಿತಿಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದ್ದು ಮೂರು ದಿನಗಳ ಸಭೆ ಯಶಸ್ವಿಯಾಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂತಸ ವ್ಯಕ್ತಪಡಿಸಿದ್ದಾರೆ.
 
ಕೇಂದ್ರ ಸರಕಾರ ಸಾಗುತ್ತಿರುವ ದಾರಿ ಸೂಕ್ತವಾಗಿದ್ದು, ಸರಕಾರ ಎಲ್ಲಾ ವಿಷಯಗಳಲ್ಲಿ ಶೇ,100 ಸಾಧನೆಗಳನ್ನು ಮಾಡದಿದ್ದರೂ ತೃಪ್ತಿ ತಂದಿದೆ ಸರಕಾರ ಕೇವಲ 14 ತಿಂಗಳದ್ದಾಗಿದ್ದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಧನೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದರು. 
 
ಭಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳು ಸಹೋದರ ದೇಶಗಳು. ಆದರೆ, ಭಾರತ ಪಾಂಡವರಾದರೆ, ಪಾಕಿಸ್ತಾನ ಕೌರವರಂತೆ ಎಂದು ಆರೆಸ್ಸೆಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ವಾಗ್ದಾಳಿ ನಡೆಸಿದರು.
 

ವೆಬ್ದುನಿಯಾವನ್ನು ಓದಿ