ದೆಹಲಿ ವಿಮಾನ ನಿಲ್ದಾಣದ ಬಳಿ ನಿಗೂಢ ಬಲೂನ್‌ಗಳ ಹಾರಾಟ

ಬುಧವಾರ, 27 ಜನವರಿ 2016 (19:19 IST)
ದೆಹಲಿ ವಿಮಾನ ನಿಲ್ದಾಣದ ಬಳಿ ನಿಗೂಢ ಬಲೂನ್‌‌ಗಳು ಆಕಾಶದಲ್ಲಿ ಹಾರಾಡುತ್ತಿರುವುದು ಕಂಡ ಪೊಲೀಸರು ವಾಯುಸೇನೆಗೆ ಮಾಹಿತಿ ನೀಡಿದ ಘಟನೆ ವರದಿಯಾಗಿದೆ.
 
ರಾಜಸ್ಥಾನದ ಬಾರ್ಮೇರ್ ಬಳಿ ಇಂತಹದೆ ಬಲೂನ್‌ಗಳಉ ಭಾರತದ ಸೀಮೆಯನ್ನು ಪ್ರವೇಸಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ  ಭಾರತೀಯ ವಾಯುಸೇನೆಯ ಪೈಲಟ್‌ಗಳನ್ನು ಬಲೂನ್‌ಗಳನ್ನು ಹೊಡೆದುರುಳಿಸಿದ ಮಾರನೇ ದಿನ ಮತ್ತೆ ನಿಗೂಢ ಬಲೂನ್‌ಗಳು ಪತ್ತೆಯಾಗಿವೆ.   
 
ಗುರ್ಗಾಂವ್ ಹತ್ತಿರ ಇಂತಹ ಶಂಕಿತ ವಸ್ತುಗಳು ಪತ್ತೆಯಾಗಿದ್ದರಿಂದ ಅಲ್ಲಿನ ನಿವಾಸಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಇಂದಿರಾಗಾಂಧಿ ವಿಮಾನ ನಿಲ್ದಾಣದ ವಾಯುಸೇನೆ ಮತ್ತು ವೈಮಾನಿಕ ನಿಯಂತ್ರಣ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.  
 
ನಿಗೂಢ ಬಲೂನ್‌ಗಳ ಹಾರಾಟದಿಂದ ವಿಮಾನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಶಂಕಿತ ವಸ್ತುಗಳ ಮೂಲ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಮಂಗಳವಾರದಂದು ಸೂಖೋಯಿ 30 ವಿಮಾನ ಆಗಸದಲ್ಲಿ ಕಂಡು ಬಂದ ನಿಗೂಢ ಬಲೂನ್‌ನನ್ನು ಹೊಡೆದುರುಳಿಸಿತ್ತು. ಇದೊಂದು ಹವಾಮಾನ ಇಲಾಖೆಯ ಬಲೂನ್ ಆಗಿರಬಹುದು ಎಂದು ಶಂಕಿಸಲಾಗಿದೆ. 

ವೆಬ್ದುನಿಯಾವನ್ನು ಓದಿ