ಪದ್ಮ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್, ಬಾಬಾ ರಾಮದೇವ್ ಹೆಸರು ಶಿಫಾರಸು

ಮಂಗಳವಾರ, 28 ಏಪ್ರಿಲ್ 2015 (16:08 IST)
ಕೇಂದ್ರ ಸರಕಾರದಿಂದ ನೀಡಲಾಗುವ ಅತ್ಯುನ್ನತ ಪದ್ಮ ಪ್ರಶಸ್ತಿಗೆ ಸೂಪರ್‌ಸ್ಟಾರ್ ರಜನಿಕಾಂತ್, ಯೋಗಾಗುರು ಬಾಬಾ ರಾಮದೇವ್ ಹಾಗೂ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ 1793 ಗೌರವಾನ್ವಿತರನ್ನು ಆಯ್ಕೆ ಮಾಡಲಾಗಿದೆ.

ಧಾರ್ಮಿಕ ಗುರುವಾದ ಮಾತಾ ಅಮೃತಾನಂದಮಯಿ, ಅಮೆರಿಕದ ರಾಯಭಾರಿ ರಾಬರ್ಟ್ ಬ್ಲಾಕ್‌ವಿಲ್, ಚಿತ್ರನಟ ಅಜಯ್ ದೇವಗನ್, ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಹಾಗೂ ಕೈಗಾರಿಕೋದ್ಯಮಿ ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರುಗಳನ್ನು ಕೂಡಾ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

ಕಳೆದ 2000 ವರ್ಷದಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ರಜನಿಕಾಂತ್, ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೂಡಾ ಪದ್ಮ ವಿಭೂಷಣ ಪ್ರಶಸ್ತಿ ಪಡೆಯಲಿದ್ದಾರೆ.

ಮಲೆಯಾಳಂ ನಟ ಮೋಹನ್‌ಲಾಲ್, ಮಾಜಿ ಮುಖ್ಯಮಂತ್ರಿ ಫಾರುಕ್ ಒಮರ್ ಅಬ್ದುಲ್ಲ ವಿರುದ್ಧ ಸ್ಪರ್ಧಿಸಿದ್ದ ಜಮ್ಮು ಕಾಶ್ಮಿರದ ಬಿಜೆಪಿ ನಾಯಕ ದಾರಾಖಶನ್ ಅಂದ್ರಾಬಿ, ಫ್ಯಾಶನ್ ಡಿಜೈನರ್ ರೀತು ಬೆರಿ, ಅಥ್ಲೀಟ್ ಅಂಜು ಬಾಬಿ ಜಾರ್ಜ್ ಬ್ಯೂಟಿಷಿಯನ್ ಶಹನಾಜ್ ಹುಸೈನ್, ಚಿತ್ರನಿರ್ಮಾಪಕ ರೋಹಿತ್ ಶೆಟ್ಟಿ, ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪ್ರೀತಾ ರೆಡ್ಡಿ ಮತ್ತು ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಹೆಸರುಗಳನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕೇಂದ್ರ ಸರಕಾರ ಪ್ರಶಸ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಮುನ್ನವೇ ನಾನು ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಯೋಗಾ ಗುರು ಬಾಬಾ ರಾಮದೇವ್ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ