ನವೆಂಬರ್‌ನಲ್ಲಿ ಲಂಡನ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ಶುಕ್ರವಾರ, 3 ಜುಲೈ 2015 (21:40 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ ತಿಂಗಳಲ್ಲಿ ಪ್ರಪ್ರಥಮ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
 
ನರೇಂದ್ರ ಮೋದಿ ನವೆಂಬರ್ 12 ರಂದು ಲಂಡನ್‌ಗೆ ತೆರಳಲಿದ್ದು, ಮೂರು ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರಲಿದ್ದಾರೆ. ನವೆಂಬರ್ 15 ಮತ್ತು 16 ರಂದು ತುರ್ಕಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ಭೇಟಿಯಾಗಲಿರುವ ಮೋದಿ, ಸಾಧ್ಯವಾದಲ್ಲಿ ಕ್ವೀನ್ ಎಲಿಜಾಬೆತ್ ಅವರನ್ನು ಕೂಡಾ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.  
 
ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಎಸ್.ಜಯಶಂಕರ್, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಇಂಗ್ಲೆಂಡ್‌ಗೆ ತೆರಳಿರುವ ಜಯಶಂಕರ್, ಬ್ರಿಟನ್ ರಾಯಭಾರಿ ಹುಗೋ ಸ್ವೈರ್ ಮತ್ತು ಬ್ರಿಟನ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಕೂಡಾ ಭೇಟಿ ಮಾಡಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 
ಅಮೆರಿಕದಲ್ಲಿ ಮಾಡಿಸನ್ ಸ್ಕೈರ್‌ನಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲಂಡನ್‌ನ ವೆಂಬ್ಲೆ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಎಸ್.ಜಯಶಂಕರ್ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ