ಮೋದಿ 'ಜಾತಿಭೇದ ನೀತಿಯ ಅತ್ಯಂತ ದುರಂತ ಇತಿಹಾಸ' ಹೊಂದಿದ್ದಾರೆ: ಯುರೋಪ್ ಸಂಸತ್ ಸದಸ್ಯ

ಗುರುವಾರ, 24 ಜುಲೈ 2014 (13:43 IST)
ಪ್ರಧಾನಿ ನರೇಂದ್ರ ಮೋದಿಯವರ ಜಾತ್ಯಾತೀತ ನಿಲುವನ್ನು ಪ್ರಶ್ನಿಸಿರುವ ಯುರೋಪಿಯನ್ ಪಾರ್ಲಿಮೆಂಟ್ ಸ್ಪ್ಯಾನಿಷ್ ಸದಸ್ಯ, ಇಜಸ್ಕುನ್ ಬಿಲ್ಬಾವೊ ಬರಾಂಡಿಕಾ ಬುಧವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ "ಜಾತಿಭೇದ ನೀತಿಯ ಅತ್ಯಂತ ಸಮಸ್ಯಾತ್ಮಕ ಇತಿಹಾಸ ಹೊಂದಿದ್ದಾರೆ" ಎಂದು ಹೇಳಿದ್ದಾರೆ.

ಮೋದಿಯವರನ್ನು ಗುರಿಯಾಗಿಸಿ ಮಾತನಾಡಿರುವ  ಯುರೋಪ್ ಲಿಬರಲ್ಸ್ ಮತ್ತು ಡೆಮೋಕ್ರಾಟ್ ಅಲೈಯನ್ಸ್ ಗ್ರೂಪ್ ಸದಸ್ಯರಾಗಿರುವ ಬರಾಂಡಿಕಾ ಭಾರತದಲ್ಲಿನ "ಅಸಮಾನತೆ ಸಮಸ್ಯೆ" ಬಗ್ಗೆ ಧ್ವನಿ ಎತ್ತರಿಸುವಂತೆ ಯುರೋಪಿಯನ್ ಕಮಿಷನ್ ಉಪಾಧ್ಯಕ್ಷರಲ್ಲಿ ಆಗ್ರಹಿಸಿದ್ದಾರೆ. 
 
ಮುಸ್ಲಿಂ ಸಮುದಾಯದ 1,000 ಜನರ ಸಾವಿಗೆ ಕಾರಣವಾದ  2002 ಗುಜರಾತ್ ಹಿಂಸಾಚಾರದಲ್ಲಿ  ಭಾರತದ ಪ್ರಧಾನಿ ಕೂಡ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 
 
ಮೋದಿ ವಿರುದ್ಧ ಹರಿಹಾಯ್ದಿರುವ ಬರಾಂಡಿಕಾ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಿಂದುಯೇತರ ಜನರನ್ನು  ಭಾರತವನ್ನು ಬಿಟ್ಟು ತಮ್ಮ ತಮ್ಮ ದೇಶಗಳಿಗೆ ವಾಪಸ್ಸಾಗುವಂತೆ ಹೇಳಿದ್ದರು. ಭಾರತದಲ್ಲಿ ಅಪಾರ ಸಂಖ್ಯೆಯ ಅಲ್ಪಸಂಖ್ಯಾತರಿದ್ದು, ಅವರೆಲ್ಲರೂ ಅತ್ಯಂತ ದರಿದ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ