ನರೇಂದ್ರ ಮೋದಿಗೆ ನಾನೆಂದ್ರೆ ತುಂಬಾ ಅಲರ್ಜಿ: ಅಣ್ಣಾ ಹಜಾರೆ

ಶುಕ್ರವಾರ, 27 ಫೆಬ್ರವರಿ 2015 (17:25 IST)
ಕೇಂದ್ರ ಸರಕಾರದ ಭೂಸ್ವಾದೀನ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನನ್ನ ಸಲಹೆಗಳನ್ನು ಸ್ವೀಕರಿಸದಿದ್ದರಿಂದ ನರೇಂದ್ರ ಮೋದಿಗೆ ನಾನೆಂದ್ರೆ ತುಂಬಾ ಅಲರ್ಜಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ಯೋಗಪತಿಗಳ ಪರವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದೆ. ಅದು ಈಗ ನಿಜವಾಗಿದೆ. ಭೂ ಸ್ವಾದೀನ ಕಾಯ್ದೆಯ ಬಗ್ಗೆ ನಾನು ನೀಡಿದ ಸಲಹೆಗಳನ್ನು ಮೋದಿ ಸ್ವೀಕರಿಸಲು ಸಿದ್ದವಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.  
 
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ಒತ್ತಾಯಪೂರ್ವಕವಾಗಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕಳೆದ 2013ರಲ್ಲಿ ಭೂ ಸ್ವಾದೀನ ಕಾಯ್ದೆ ಒಪ್ಪಂದ ಜಾರಿಯಾದ ನಂತರ ಇದೀಗ ಕಾಯ್ದೆಯಲ್ಲಿ ಬದಲಾವಣೆ ತರುವ ಅಗತ್ಯ ಎಲ್ಲಿಂದ ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.
 
ಶೀಘ್ರದಲ್ಲಿ ಪ್ರತಿಭಟನೆಯ ರೂಪರೇಶೆಗಳನ್ನು ರೂಪಿಸಿ ದೇಶದ ಪ್ರತಿಯೊಂದು ಗ್ರಾಮಗಳಲ್ಲಿ ಕೇಂದ್ರ ಸರಕಾರದ ವಿರುದ್ಧದ ಹೋರಾಟಕ್ಕೆ ಜನತೆಯನ್ನು ಸಜ್ಜುಗೊಳಿಸಲಾಗುವುದು ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಕೇಂದ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ