ಚುನಾವಣೆ ಪ್ರಚಾರ: 3 ಲಕ್ಷ ಕಿ.ಮೀ ಪಯಣಿಸಿದ ನರೇಂದ್ರ ಮೋದಿ

ಬುಧವಾರ, 30 ಏಪ್ರಿಲ್ 2014 (20:11 IST)
ಬಿಜೆಪಿ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟ ನಂತರ ಸೆಪ್ಟೆಂಬರ್ 15, 2013 ರಂದು ತಮ್ಮ ಮೊದಲ ಪ್ರಚಾರ ಸಭೆಯನ್ನು ಕೈಗೊಂಡಿದ್ದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಲ್ಲಿಯವರೆಗೆ 437 ಸಾರ್ವಜನಿಕ ಸಮಾವೇಶಗಳನ್ನು ನಡೆಸಿದ್ದು,ಮೇ 12ರವರೆಗೆ ಪರಿಗಣಿಸುವುದಾದರೆ ಮೂರು ಲಕ್ಷ ಕಿಮೀ ಹಾದಿಯನ್ನು ಕ್ರಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  
 
ಒಂಬತ್ತು ಹಂತಗಳ ಚುನಾವಣೆಗಳ ಅಂತಿಮ ಸುತ್ತು ಮೇ 12 ರವರೆಗೆ ಇದ್ದು, ಮೇ 10ರವರೆಗಿನ ಪ್ರಚಾರದ ಲೆಕ್ಕಾಚಾರಗಳನ್ನು ಆಧರಿಸಿ ಈ ಅಂಕಿಸಂಖ್ಯೆಯನ್ನು ಅಂದಾಜಿಸಲಾಗಿದೆ. 
 
ಅತ್ಯಾಧುನಿಕ ಪ್ರಚಾರ ತಂತ್ರವಾದ 3Dಯನ್ನು ಬಳಸಿ 1350 ಸಭೆಗಳಲ್ಲಿ ಸಂಭೋಧಿಸಿರುವುದರ  ಹೊರತಾಗಿಯೂ, ಅವರು 3 ಲಕ್ಷ ಕಿಮೀ ಪ್ರಯಾಣ ಮಾಡಿ, 25 ರಾಜ್ಯಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ  ಭಾರತದ ಚುನಾವಣಾ ಇತಿಹಾಸದಲ್ಲಿಯೇ  ದೊಡ್ಡ ಸಮೂಹ ಪ್ರಭಾವ ಕೈಗೊಂಡಿದ್ದಾರೆ ಎಂದು ಪಕ್ಷ ಹೇಳಿದೆ.
 
ಸೆಪ್ಟೆಂಬರ್ 15 ರಂದು ಮಾಜಿ ಸೈನಿಕರ ಜತೆ ಹರಿಯಾಣದ ರೆವಾರಿಯಲ್ಲಿ ಪ್ರಾರಂಭವಾದ ಪ್ರಚಾರ ಸಭೆ ಮೇ 10 ರ ಸಂಜೆಯ ತನಕ ಮುಂದುವರಿಯಲಿದೆ. 
 
437 ಸಾರ್ವಜನಿಕ ಸಭೆಗಳ ಜೊತೆಗೆ,  ದೇಶಾದ್ಯಂತ 3D ತಂತ್ರಜ್ಞಾನದ ಮೂಲಕ ಅನೇಕ ನಗರಗಳನ್ನು ಮೋದಿ ಸಂಪರ್ಕಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಮೇ 1 ರಿಂದ 10 ನಡುವೆ 600, 3D ಸಭೆಗಳನ್ನು ಯೋಜಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ