ಮೋದಿಯ "ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್" ಮಹಾನ್ ಪರಿಕಲ್ಪನೆ: ಜಾನ್ ಕೆರ್ರಿ

ಮಂಗಳವಾರ, 29 ಜುಲೈ 2014 (15:32 IST)
ನರೇಂದ್ರ ಮೋದಿಯವರ ''ಎಲ್ಲರ ಜತೆಗೆ, ಎಲ್ಲರ ವಿಕಾಸ' ಮಹಾನ್ ಪರಿಕಲ್ಪನೆಯಾಗಿದೆ ಎಂದು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಬಣ್ಣಿಸಿದ್ದಾರೆ.

ಇನ್ನೆರಡು ದಿನಗಳ ನಂತರ ಭಾರತಕ್ಕೆ ಭೇಟಿ ನೀಡಲಿರುವ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಯ್ತುಂಬ ಹೊಗಳಿದ್ದು, ವಾಷಿಂಗ್ಟನ್ ಮತ್ತು ದೆಹಲಿ ನಡುವೆ ದೀರ್ಘಕಾಲದ ಸಹಭಾಗಿತ್ವಕ್ಕಾಗಿ ಒಂದು ಮಾರ್ಗಸೂಚಿಯನ್ನು ಹೊರತಂದಿದ್ದಾರೆ.
 
ಅಮೇರಿಕನ್ ಪ್ರಗತಿ ಕೇಂದ್ರದ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಕೆರ್ರಿ ಭಾರತದೊಂದಿಗಿನ ಅಮೇರಿಕಾದ 'ಸಂಬಂಧ  21 ನೇ ಶತಮಾನದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪರಿಣಾಮ ಬೀರಲಿದೆ' ಎಂದು ತಿಳಿಸಿದ್ದಾರೆ.
 
ಭಾರತ-ಅಮೇರಿಕಾ ಸಂಬಂಧಗಳು ಒಟ್ಟಿಗೆ ಅರಳಬೇಕಿದೆ ಎಂದ, ಕೆರ್ರಿ "ಅಮೇರಿಕಾದ ಮತ್ತು ಭಾರತ ಮತ್ತು 21 ನೇ ಶತಮಾನದ ಅನಿವಾರ್ಯ ಪಾಲುದಾರರಾಗಬೇಕಿದೆ ಎಂದು  ಹೇಳಿದ್ದಾರೆ. 
 
''ಹವಾಮಾನ ಬದಲಾವಣೆ, ಶುದ್ಧ ಶಕ್ತಿ ಇವೇ ಮುಂತಾದ ಜಾಗತಿಕ  ಸವಾಲುಗಳನ್ನು ನಿಭಾಯಿಸಲು ಎರಡು ದೇಶಗಳು ಒಟ್ಟಿಗೆ ಕಾರ್ಯನಿರ್ವಹಿಸಬೇಕು" ಎಂದು ಅವರು ಆಶಿಸಿದ್ದಾರೆ.
 
''ಭಾರತದೊಂದಿಗೆ ನಿಕಟ ಸಂಬಂಧ ಅನಿವಾರ್ಯ ಹಾಗೂ ಅಗತ್ಯವಾಗಿದೆ. ಇದು ಹೊಸ ಅವಕಾಶ, ಹೊಸ ಸಾಧ್ಯತೆಗಳ ಜತೆ ಹೊಸ ಸರ್ಕಾರದೊಂದಿಗೆ  ಹೊಸ ಮಾತುಕತೆ ನಡೆಸಬೇಕಾದ ಸಮಯ'' ಎಂದ  ಕೆರ್ರಿ "ಬದಲಾವಣೆ ಮತ್ತು ಸುಧಾರಣೆ " ಭರವಸೆಯೊಂದಿಗೆ ಮೋದಿ ಐತಿಹಾಸಿಕ ಜನಾದೇಶವನ್ನು ಗೆದ್ದಿರುವುದನ್ನು ಕೂಡ ಉಲ್ಲೇಖಿಸಿದರು.
 
''ಭಾರತದೊಂದಿಗಿನ ಪಾಲುದಾರಿಕೆ ಬಾಂಧವ್ಯದಲ್ಲಿ ಸಂಭವನೀಯ ಪರಿವರ್ತನೆಯ ಕ್ಷಣವಿದು. ಭಾರತದ ಜತೆಗಿನ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಲು ದೊರೆತಿರುವ ಈ ವ್ಯೂಹಾತ್ಮಕ ಮತ್ತು ಐತಿಹಾಸಿಕ ಅವಕಾಶಗಳನ್ನು ಬಳಸಿಕೊಳ್ಳಲು ಅಮೇರಿಕಾ ಸಿದ್ಧವಾಗಿದೆ'' ಎಂದು ಅವರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ