ಮೋದಿ ಪಾಸ್‌ಪೋರ್ಟ್ ವಿವರಕ್ಕಾಗಿ ಆರ್‌ಟಿಐ ಸಲ್ಲಿಸಿದ ಪತ್ನಿ ಜಶೋದಾ ಬೆನ್

ಗುರುವಾರ, 11 ಫೆಬ್ರವರಿ 2016 (14:21 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಸ್‌ಪೋರ್ಟ್ ವಿವರ ಕೇಳಿ ಅವರ ಪತ್ನಿ ಜಶೋಧಾ ಬೆನ್ ಬುಧವಾರ ಆರ್‌ಟಿಐ ಅರ್ಜಿ ಸಲ್ಲಿಸಿದ್ದಾರೆ. 

ತಮ್ಮ ಸಹೋದರ ಅಶೋಕ್ ಮೋದಿ ಮತ್ತು ಮತ್ತೋರ್ವ ಸಂಬಂಧಿಕರೊಂದಿಗೆ ಆಟೋದಲ್ಲಿ ಬಂದು ಅರ್ಜಿ ಸಲ್ಲಿಸಿ ಬೆನ್ ಮರಳಿದ್ದಾರೆ ಎಂದು ತಿಳಿದು ಬಂದಿದೆ. 
 
ಬೆನ್ ಪಾಸ್‌ಪೋರ್ಟ್‌ಗಾಗಿ ನವೆಂಬರ್ 2015ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮದುವೆ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅವರ ಅರ್ಜಿ ತಿರಸ್ಕೃತವಾಗಿತ್ತು. ಆದ್ದರಿಂದ ಪ್ರಧಾನಿ ಮೋದಿಯವರ ಪಾಸ್‌ಪೋರ್ಟ್‌ಲ್ಲಿರುವ ವಿವಾಹ ಸಂಬಂಧದ ಕುರಿತ ಮಾಹಿತಿ ಪಡೆಯಲು ಅವರು ಆರ್‌ಟಿಐ ಸಲ್ಲಿಸಿದ್ದಾರೆ ಎಂದು ಅವರ ಸಹೋದರ ಅಶೋಕ್ ಮೋದಿ ತಿಳಿಸಿದ್ದಾರೆ.
 
ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಆದಷ್ಟು ಬೇಗ ಅವರಿಗೆ ಉತ್ತರಿಸಲಾಗುವುದು ಎಂದು ವಿಭಾಗೀಯ ಪಾಸ್‌ಪೋರ್ಟ್‌ ಕಚೇರಿ ಅಧಿಕಾರಿ ಝಡ್. ಎ. ಖಾನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ