ಪ್ರಧಾನಿ ಹುದ್ದೆಗೆ ಈಗಲೂ ಮೋದಿಯೇ ಉತ್ತಮ ಅಭ್ಯರ್ಥಿ

ಶುಕ್ರವಾರ, 19 ಫೆಬ್ರವರಿ 2016 (16:20 IST)
ಪ್ರಧಾನಿ ಹುದ್ದೆಗೆ ಈಗಲೂ ನರೇಂದ್ರ ಮೋದಿ ಅವರು ಅತ್ಯುತ್ತಮ ಅಭ್ಯರ್ಥಿ ಎಂದು ಇತ್ತೀಚಿಗೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.  
 
ಟುಡೆ-ಕಾರ್ವಿ ಇನ್ಸೈಟ್ಸ್ ಆಯೋಜಿಸಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿಯವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 
 
ಆದಾಗ್ಯೂ ಈಗಲೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 286 ಸೀಟುಗಳನ್ನು ಪಡೆದುಕೊಂಡು ಗೆಲ್ಲಲಿದೆ. ಜತೆಗೆ ಎನ್‌ಡಿಎಯ ಮತಹಂಚಿಕೆಯಲ್ಲಿ 37 ಪ್ರತಿಶತ ಬದಲಾವಣೆಯಿಲ್ಲ ಎಂದು ಸಮೀಕ್ಷೆ ಹೇಳಿದೆ. 
 
ಪ್ರಮುಖ ಸಮಸ್ಯೆಗಳ ಬಗ್ಗೆ ಹೇಳುವುದಾದರೆ ಸರ್ವೆಯಲ್ಲಿ ಭಾಗವಹಿಸಿದ 40% ಜನರ ಪ್ರಕಾರ ಅಸಹಿಷ್ಣುತೆ ಹೆಚ್ಚಳ, ತಲಾ 34 ಪ್ರತಿಶತ ಜನರು ಬೆಲೆ ಏರಿಕೆ ಮತ್ತು ಭೃಷ್ಟಾಚಾರ, 7 ಪ್ರತಿಶತ ಜನರು ಆರ್ಥಿಕತೆ ಮತ್ತು ಭಯೋತ್ಪಾದನೆ ಬಗ್ಗೆ ಮಾತನಾಡಿದ್ದಾರೆ. 
 
ಮೋದಿ ಸರ್ಕಾರ ಚುನಾವಣೆ ಪೂರ್ವ ವಾಗ್ದಾನ ಮಾಡಿದಂತೆ ಅಚ್ಛೇ ದಿನ್ (ಉತ್ತಮ ದಿನ) ತರುವಲ್ಲಿ ಸಫಲವಾಗಿದೆಯಾ ಎಂಬ ಪ್ರಶ್ನೆಗೆ 40% ಜನರು  ಹೌದು ಎಂದರೆ, 31 ಪ್ರತಿಶತ ಜನರು ಇಲ್ಲ ಎಂದಿದ್ದಾರೆ ಮತ್ತೆ 22 ಪ್ರತಿಶತ ಜನರ ಪ್ರಕಾರ ಪರಿಸ್ಥಿತಿ ಮೊದಲಿನಂತೆ ಇದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ