ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಶುಭಕೋರಲಿರುವ ಪ್ರಧಾನಿ ಮೋದಿ

ಭಾನುವಾರ, 3 ಜುಲೈ 2016 (16:28 IST)
ಮುಂದಿನ ತಿಂಗಳು ಬ್ರೆಝಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳನ್ನು ಮೋದಿ ನಾಳೆ ಭೇಟಿಯಾಗಲಿದ್ದಾರೆ. ಅಗಸ್ಟ್ 5ರಿಂದ 21ರವರೆಗೆ ಬ್ರೆಝಿಲ್‌ನ ರಿಯೋ ಒಲಿಂಪಿಕ್ಸ್‌ನಲ್ಲಿ ನಡೆಯಲಿರುವ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳನ್ನು ಮೋದಿ ಭೇಟಿಯಾಗಿ ಹಾರೈಸಲಿದ್ದಾರೆ. 

ಮಾನೆಕ್ ಶಾ ಕೇಂದ್ರದಲ್ಲಿ ಈವರೆಗೆ 13 ಕ್ರೀಡೆಗಳಲ್ಲಿ ಅರ್ಹತೆ ಗಳಿಸಿರುವ ಸುಮಾರು ನೂರಕ್ಕೂ ಅಧಿಕ ಸ್ಪರ್ಧಾಳುಗಳ ಜತೆಗೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಮೋದಿ ಅನೌಪಚಾರಿಕವಾಗಿ ಸಂವಾದ ನಡೆಸಲಿದ್ದಾರೆ. 
 
2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 83 ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು. ಆದರೆ ಈ ಬಾರಿ ಸುಮಾರು 100 ಕ್ಕೂ ಅಧಿಕ ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇದು ಭಾರತ ಇದುವರೆಗೂ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕಳುಹಿಸುತ್ತಿರುವ ಅತಿದೊಡ್ಡ ಕ್ರೀಡಾ ಪಟುಗಳ ತಂಡವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ