ಪೂರ್ವಜನ್ಮದಲ್ಲಿ ಕಟ್ಟಾ ಸಂಪ್ರದಾಯವಾದಿ ಮುಸ್ಲಿಂ ಆಗಿದ್ದರಂತೆ ನರೇಂದ್ರ ಮೋದಿ!

ಬುಧವಾರ, 10 ಸೆಪ್ಟಂಬರ್ 2014 (12:34 IST)
ಪ್ರಧಾನಿ ನರೇಂದ್ರ ಮೋದಿ ಕಳೆದ ಜನ್ಮದಲ್ಲಿ ಮುಸಲ್ಮಾನರಾಗಿದ್ದರಂತೆ. ಆಶ್ಚರ್ಯವಾಗುತ್ತಿದೆಯಾ? ಅಮೇರಿಕಾದ ಸಂಸ್ಥೆಯೊಂದರ ಸಂಶೋಧನೆ ಈ ಫಲಿತಾಂಶವನ್ನು ನೀಡಿದೆ. 
 
ವಿಜ್ಞಾನ ಮತ್ತು ಆತ್ಮ ಅಂತರ್ದೃಷ್ಟಿಯ ಏಕೀಕರಣ ಸಂಸ್ಥೆ (IISIS) ಪುರ್ನರ್ಜನ್ಮ ಮತ್ತು ಭವಿಷ್ಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದು, ಮಾನಸಿಕ ವಿಶ್ಲೇಷಕರ ಸಹಾಯದೊಂದಿಗೆ ಈಗಾಗಲೇ ಅನೇಕ ಸ್ತ್ರೀ- ಪುರುಷರ, ಮಕ್ಕಳ, ಪಶು-ಪಕ್ಷಿಗಳ ಪೂರ್ವಜನ್ಮದ ಕುರಿತು ಅಧ್ಯಯನ ನಡೆಸಿದೆ.
 
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೂಡ ಅಭ್ಯಸಿಸಿರುವ ಸಂಸ್ಥೆ ಮೋದಿ ಪೂರ್ವಜನ್ಮದಲ್ಲಿ ಖ್ಯಾತ ಮುಸ್ಲಿಂ ನಾಯಕರಾಗಿದ್ದರೆಂದು ಹೇಳಿದೆ. ಮುಸ್ಲಿಂರ ಪ್ರಗತಿಗೆ ಕೆಲಸ ಮಾಡಿದ್ದ ಆ ನಾಯಕ ಪಾಕಿಸ್ತಾನ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದನಂತೆ. 
 
ಐಐಎಸ್ಐಎಸ್ ವೆಬ್ಸೈಟ್‌ನಲ್ಲಿ ಪ್ರಕಟವಾಗಿರುವ ವಾಲ್ಟ್ ಸೆಮಿಕೀವ್ ಲೇಖನದ ಪ್ರಕಾರ, ಅಲೀಗಡ್ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪಕ ಸರ್ ಸೈಯದ್ ಅಹಮದ್ ಖಾನ್ ನರೇಂದ್ರ ಮೋದಿಯಾಗಿ ಜನಿಸಿದ್ದಾರಂತೆ.
 
ಸೆಮಿಕೀವ್ ತಮ್ಮ ಸಹೋದ್ಯೋಗಿ ಕೆವಿನ್ ರಿಯರ್ಸನ್ ಜತೆಗೆ ಜಂಟಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾರತೀಯರೊಬ್ಬರು ತಮ್ಮಲ್ಲಿ ಮೋದಿಯವರ ಪೂರ್ವಜನ್ಮದ ಬಗ್ಗೆ ಪ್ರಶ್ನಿಸಿದ್ದರು.ಆದ್ದರಿಂದ ಮತ್ತೊಬ್ಬ ಸಂಶೋಧಕರ ಜತೆಗೂಡಿ ಮೋದಿಯವರ ಕಳೆದ ಹುಟ್ಟಿನ ಬಗ್ಗೆ ಅವರು ಅಭ್ಯಸಿಸಿದ್ದರು.
 
ತಮ್ಮ ಆರಂಭಿಕ ಶೋಧನೆಯ ಬಳಿಕ ಮಾತನಾಡುತ್ತಿದ್ದ ಸಂಶೋಧಕರು  ಮೋದಿ ಪೂರ್ವಜನ್ಮದಲ್ಲಿ ಪ್ರಸಿದ್ಧ ಮುಸ್ಲಿಂ ನಾಯಕರಾಗಿದ್ದರು.  ಅವರು ಮುಸ್ಲಿಂ ಮತೀಯರಿಗಾಗಿ ಪ್ರತ್ಯೇಕ ರಾಷ್ಟ್ರ ಕಟ್ಟಲು ಹೋರಾಡಿದರು. ಅವರ ಈ ಕನಸು ಪಾಕಿಸ್ತಾನದ ರೂಪದಲ್ಲಿ ಸಾಕಾರಗೊಂಡಿತು ಎಂದಿದ್ದಾರೆ. 
 
ವಿಶೇಷವೆಂದರೆ ಮೋದಿ ಮತ್ತು ಸಯ್ಯದ್ ಅವರ ಮುಖ ಚಹರೆಯಲ್ಲಿ ಕೂಡ ಸಾಮ್ಯತೆಗಳು ಕಂಡುಬಂದಿವೆ. 
 
ಸರ್ ಸೈಯ್ಯದ್ ಮುಸ್ಲಿಂರಾಗಿದ್ದರು ಮತ್ತು ಮೋದಿ ಹಿಂದು? ಈ ಪ್ರಶ್ನೆಗೆ ಉತ್ತರಿಸಿದ ಸಂಶೋಧಕರು ಆತ್ಮಗಳು ಧರ್ಮ, ಜಾತಿ, ರಾಷ್ಟ್ರಗಳನ್ನು ಬದಲಿಸುತ್ತಿರುತ್ತವೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ