ನರೇಂದ್ರ ಮೋದಿ ಬಾದಶಾನಂತೆ ವರ್ತಿಸುತ್ತಾರೆ: ಆಜಂ ಖಾನ್

ಶನಿವಾರ, 2 ಜುಲೈ 2016 (18:32 IST)
ಪ್ರಧಾನಿ ಮೋದಿ ಬಾದಶಾನಂತೆ ವರ್ತಿಸುತ್ತಿದ್ದಾರೆ ಎಂದು ಸಮಾಜವಾದಿ ಹಿರಿಯ ನಾಯಕ, ಉತ್ತರ ಪ್ರದೇಶದ ಸಚಿವ ಅಜಂ ಖಾನ್ ಆರೋಪಿಸಿದ್ದಾರೆ. 

ಮೋದಿ ಬಾದಶಾನಂತೆ ವರ್ತಿಸುತ್ತಿದ್ದಾರೆ. ಸ್ಮಾರ್ಟ್ ವಿಲ್ಹೇಜ್ ನಿರ್ಮಿಸಬೇಕಾದ ಅಗತ್ಯವಿದೆ. ಆದರೆ ಅವರು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. 
 
ಮೋದಿ ಸರ್ಕಾರ ಬಂಡವಾಳಶಾಹಿಗಳಿಗೆ ಆದ್ಯತೆ ನೀಡುತ್ತದೆ. ಗೋವು, ಗಂಗಾದಂತಹ ವಿಷಯಗಳನ್ನು ಎತ್ತಿ ಜನರನ್ನು ವಂಚಿಸುತ್ತಿದೆ. ನಿಜವಾಗಿಯೂ ಅವರು ಗೋವುಗಳನ್ನು ಗೌರವಿಸುತ್ತಿದ್ದಾರೆಂದರೆ ಪಂಚತಾರಾ ಹೋಟೆಲ್‌ಗಳಲ್ಲಿ ಬೀಫ್ ವಿತರಣೆಯನ್ನು ನಿಲ್ಲಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.  
 
ಅಜಂ ಖಾನ್ ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪಗಳನ್ನು ಹೇರುವುದು ಇದೇ ಮೊದಲಲ್ಲ. ವಿವಾದಾತ್ಮಕ ಹೇಳಿಕೆಗಳಿಂದಲೇ ಗುರುತಿಸಿಕೊಳ್ಳುವ ಅವರು ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಪಾಕ್ ಪ್ರಧಾನಿ ನವಾಜ್ ಶರೀಫ್ ಮನೆಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಅವರನ್ನು ಭೇಟಿಯಾಗಿದ್ದರು ಎಂದು ಗಂಭೀರ ಆರೋಪ ಹೊರಿಸಿದ್ದರು. 

ವೆಬ್ದುನಿಯಾವನ್ನು ಓದಿ