ನಸೀಮ್ ಅಹ್ಮದ್ ಜೈದಿ ಮುಖ್ಯ ಚುನಾವಣೆ ಆಯುಕ್ತ

ಭಾನುವಾರ, 19 ಏಪ್ರಿಲ್ 2015 (18:18 IST)
ಡಾ. ಸೈಯದ್ ನಸೀಮ್ ಅಹ್ಮದ್ ಜೈದಿ ಭಾನುವಾರ ಭಾರತದ 20 ಮುಖ್ಯ ಚುನಾವಣೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಅವರು ನಿನ್ನೆ ನಿವೃತ್ತರಾದ ಹರಿಶಂಕರ್ ಬ್ರಹ್ಮಾ ಅವರಿಗೆ ಉತ್ತರಾಧಿಕಾರಿಯಾಗಿದ್ದಾರೆ.

 ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ತಾವು ಪ್ರಯತ್ನಿಸುವುದಾಗಿ ಮತ್ತು ಚುನಾವಣೆ ಆಯೋಗದ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು. 
 
ಸರ್ಕಾರ ಚುನಾವಣೆ ಆಯುಕ್ತರ ಎರಡು ಖಾಲಿ ಹುದ್ದೆಗಳನ್ನು ಇನ್ನೂ ತುಂಬಬೇಕಿದ್ದು, ಮೂವರು ಸದಸ್ಯರ ಚುನಾವಣೆ ಆಯೋಗಕ್ಕೆ ಅವರು ಏಕೈಕ ಸದಸ್ಯರಾಗಿದ್ದಾರೆ.  2017ರ ಜುಲೈಗೆ ಅವರು 65 ವರ್ಷ ಪೂರೈಸುವುದರಿಂದ ಅಲ್ಲಿಯವರೆಗೆ  ಸಿಇಸಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ. ಚುನಾವಣೆ ಆಯುಕ್ತರು 6 ವರ್ಷಗಳವರೆಗೆ ಅಥವಾ 65 ವರ್ಷ ತುಂಬುವವರೆಗೆ ಅಧಿಕಾರದಲ್ಲಿ ಮುಂದುವರಿಯಬಹುದು. 

ವೆಬ್ದುನಿಯಾವನ್ನು ಓದಿ