ಆರ್‌ಎಸ್ಎಸ್‌ನಿಂದ ಮತ್ತೆ ದೇಶ ಇಬ್ಭಾಗವಾಗಬಹುದು: ಮದನಿ

ಮಂಗಳವಾರ, 31 ಮಾರ್ಚ್ 2015 (17:43 IST)
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರಿಂದ ದೇಶ ಮತ್ತೆ ಹೋಳಾಗುವ ಸಾಧ್ಯತೆ ಇದೆ ಎಂದು ಭಾರತೀಯ ಉಪಖಂಡದ ದೊಡ್ಡ ಮುಸ್ಲಿಂ ಸಂಘಟನೆಗಳೊಂದಾದ ಜಮೀಯತ್ ಉಲ್ಮಾ ಇ-ಹಿಂದ್ (JUH) ಮುಖ್ಯಸ್ಥ ಆರೋಪಿಸಿದ್ದಾರೆ. 

ಸಹರಾಣಾಪುರದ ದಿಯೋಬಂಧ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಜಮೀಯತ್ ಉಲ್ಮಾ ಇ-ಹಿಂದ್ (JUH) ಮುಖ್ಯಸ್ಥ ಅರ್ಷದ್ ಮದನಿ,  ಬಿಜೆಪಿ ಹಾಗೂ ಆರ್‌ಎಸ್ಎಸ್ ನಾಯಕರು ಮುಸ್ಲಿಂ ಸಮುದಾಯದ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕಲು ಕೋಮುವಾದಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಆರ್‌ಎಸ್ಎಸ್ ಒತ್ತಡದಿಂದ ಪ್ರಧಾನಿ ಮೌನ ವಹಿಸಿದ್ದಾರೆ. ನಾವು ಕಳೆದ 70 ವರ್ಷಗಳಿಂದ ಸಂಘವನ್ನು ಗಮನಿಸುತ್ತಿದ್ದೇವೆ ಮತ್ತು ನಿಜವಾದ ಅಜೆಂಡಾ ಏನೆಂದು ತಿಳಿದುಕೊಂಡಿದ್ದೇವೆ.  ಸಾಂದರ್ಭಿಕ ಅನುಕಂಪದ ಮಾತುಗಳಿಂದ  ಅವರು ನಮ್ಮ ಹಾದಿ ತಪ್ಪಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. 
 
ಈ ಜನರನ್ನು ತಡೆಯದಿದ್ದರೆ ದೇಶ ಮತ್ತೆ ಇಬ್ಭಾಗವಾಗುವುದು ನಿಶ್ಚಿತ. ಸಂಘ ಕೇವಲ ಮುಸ್ಲಿಮ್ ಸಮುದಾಯಕ್ಕೆ ಅಷ್ಟೇ ಮಾರಕವಲ್ಲ. ಹಿಂದೂಗಳಿಗೂ ಕೂಡ. ಈ ಹಿಂದೆ ಕೂಡ ದೇಶ ಕೋಮುವಾದಿ ಶಕ್ತಿಗಳಿಂದ ಭಾಗವಾಗಿತ್ತು. ಅವರನ್ನು ತಡೆಯದಿದ್ದರೆ ದೇಶ ಭಾಗವಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿರುವ ಅವರು ಯಾವುದೇ ಸಮುದಾಯದಲ್ಲಿ ಭಯಭೀತಿ ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಜಮೀಯತ್ ಉಲ್ಮಾ ಇ-ಹಿಂದ್ (JUH) ಮುಖ್ಯಸ್ಥ ಅರ್ಷದ್ ಮದನಿ ಪ್ರಧಾನಿಯವರಲ್ಲಿ ಒತ್ತಾಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ