ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಗೀತೆಗೆ ಅಪಮಾನ

ಶನಿವಾರ, 23 ಮೇ 2015 (15:27 IST)
ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿಯೇ ರಾಷ್ಟ್ರಗೀತೆಯನ್ನು 20 ಸೆಕೆಂಡ್‌ಗಳ ಕಾಲ ಕಡಿತಗೊಳಿಸಿ ಅಪಮಾನ ಮಾಡಿದ ಘಟನೆ ಮುಖ್ಯಮಂತ್ರಿ ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ನಡೆದಿದೆ.
 
ಮದ್ರಾಸ್ ವಿಶ್ವವಿದ್ಯಾನಿಲಯದ ಆಡಿಟೋರಿಯಂನಲ್ಲಿ ನಡೆದ ಸಿಎಂ ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ  ಜನ ಗಣ ಮನ ರಾಷ್ಟ್ರಗೀತೆಗೆ ಚಾಲನೆ ನೀಡಲಾಯಿತು. ಆದರೆ ರಾಷ್ಟ್ರಗೀತೆ ಮುಗಿಯುವ ಮುನ್ನವೇ ಅದನ್ನು ಕಡಿತಗೊಳಿಸಿ ಪ್ರಮಾಣ ವಚನ ಸ್ವೀಕಾರದ ನಂತರ ಮತ್ತೆ ರಾಷ್ಟ್ರಗೀತೆಗೆ ಚಾಲನೆ ನೀಡಲಾಯಿತು.  
 
ಭ್ರಷ್ಟಾಚಾರ ಆರೋಪಗಳಿಂದಾಗಿ ಸುಮಾರು ಎಂಟು ತಿಂಗಳುಗಳ ನಂತರ ಸಾರ್ವಜನಿಕ ಜೀವನಕ್ಕೆ ಮರಳಿದ ಸಿಎಂ ಜಯಲಲಿತಾ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಇತರ 28 ಮಂದಿ ಸಚಿವರು ಕೂಡಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್, ಸೂಪರ್ ಸ್ಟಾರ್ ರಜನಿಕಾಂತ್, ಶಾಸಕ ಶರತ್ ಕುಮಾರ್ ಮತ್ತು ಸಂಗೀತ ನಿರ್ದೇಶಕ ಇಳಿಯರಾಜಾ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.   
 
ಕಳೆದ ಸೆಪ್ಟೆಂಬರ್ 27 ರಂದು 66.66 ಕೋಟಿ ರೂಪಾಯಿ ಅಕ್ರಮ ಆಸ್ತಿ ಹಗರಣದಲ್ಲಿ ಹೈಕೋರ್ಟ್‌ನಿಂದ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದರಿಂದ ಜಯಲಲಿತಾ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ ಮೇ 11 ರಂದು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ನಿರ್ದೋಶಿ ಎಂದು ಆದೇಶ ನೀಡಿತ್ತು.
 

ವೆಬ್ದುನಿಯಾವನ್ನು ಓದಿ