ನ್ಯಾಷನಲ್ ಹೆರಾಲ್ಡ್ : ಸೋನಿಯಾ, ರಾಹುಲ್ ವೈಯಕ್ತಿಕ ಹಾಜರಾತಿಗೆ ಕೋರ್ಟ್ ವಿನಾಯಿತಿ

ಶುಕ್ರವಾರ, 12 ಫೆಬ್ರವರಿ 2016 (14:53 IST)
ನ್ಯಾಷನಲ್‌ ಹೆರಾಲ್ಡ್ ಕೇಸ್ ವಿಚಾರಣಾಧೀನ ನ್ಯಾಯಾಲಯಕ್ಕೆ ಖುದ್ದು ಹಾಜರಾತಿ ಕುರಿತಂತೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ವಿನಾಯಿತಿ ನೀಡಿ ಕೋರ್ಟ್ ಆದೇಶ ನೀಡಿದೆ.
 
ದೆಹಲಿ ಹೈಕೋರ್ಟ್ ಕಾಂಗ್ರೆಸ್ ಮುಖಂಡರ ವಿರುದ್ಧ ನೀಡಿದ್ದ ಕೆಲ ಕಂಪೆನಿಗಳ ಆರೋಪಗಳನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಕಂಪೆನಿಗಳ ಮುಖ್ಯಸ್ಥರು ಆರೋಪಿಗಳಾಗಿ ಪ್ರಕರಣ ಎದುರಿಸಲಿ ಎಂದು ಆದೇಶಿಸಿತು.
 
ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಹತ್ವದ ಸ್ಥಾನದಲ್ಲಿರುವುದರಿಂದ ತಪ್ಪಿಸಿಕೊಂಡು ಹೋಗುವುದಿಲ್ಲ ಎನ್ನುವ ಭರವಸೆ ಮೇರೆಗೆ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ ಎಂದು ಅಪೆಕ್ಸ್ ಕೋರ್ಟ್ ಹೇಳಿಕೆ ನೀಡಿದೆ.
 
ಬಿಜೆಪಿ ಮುಖಂಡ ಸುಬ್ರಹ್ಮಮಣ್ಯಂ ಸ್ವಾಮಿಯವರ ವಂಚನೆ ಪ್ರಕರಣ ಕುರಿತಂತೆ ಎಲ್ಲಾ ವಿಚಾರಣೆಗಳನ್ನು ಗಾಂಧಿ ಕುಟುಂಬ ಪ್ರಶ್ನಿಸಬಹುದು ಎಂದು ಸುಪ್ರೀಂಕೋರ್ಟ್ ಅನುಮತಿ ನೀಡಿತು. 

ವೆಬ್ದುನಿಯಾವನ್ನು ಓದಿ