ನಮಗೆ ಕೆಲಸದಲ್ಲಿ ನಂಬಿಕೆ, ಪ್ರಚಾರದಲ್ಲಲ್ಲ: ಪ್ರಧಾನಿಗೆ ಪಟ್ನಾಯಕ್ ಟಾಂಗ್

ಮಂಗಳವಾರ, 7 ಜೂನ್ 2016 (18:25 IST)
ನಾವು ಕೆಲಸದಲ್ಲಿ ನಂಬಿಕೆ ಇಟ್ಟಿದ್ದೇವೆ, ಪ್ರಚಾರಗಿಟ್ಟಿಸುವುದರಲ್ಲಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ. 
 
ತನ್ನ 16 ವರ್ಷದ ಆಳ್ವಿಕೆಯಲ್ಲಿ ಸರ್ಕಾರ ಎಂದಾದರು ತನ್ನ ಸಾಧನೆಯ ಪಟ್ಟಿಯನ್ನು ನಿಮ್ಮ ಮುಂದೆ ಇಟ್ಟಿದೆಯಾ ಎಂದು ಕಳೆದ ನಾಲ್ಕು ದಿನಗಳ ಹಿಂದೆ ಒಡಿಶಾದ ಜನತೆಯಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ನಾಯಕ್ ತಮ್ಮ ಸರ್ಕಾರದ ಸಾಧನೆ ಪಟ್ಟಿಯನ್ನು ಜನರ ಮುಂದಿಟ್ಟಿದ್ದಾರೆ. 
 
ಸಿಎಂ ಮೋದಿ ಅವರು ಮಾಡಿದ್ದ ಒಡಿಶಾ ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಟೀಕೆಗೆ ಪ್ರತ್ಯುತ್ತರ ನೀಡುತ್ತಿದ್ದ ಅವರು, ತಮ್ಮ ಸರ್ಕಾರ ಅತ್ಯಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕೇಂದ್ರದ ನಿಧಿ ಕಡಿತದ ಹೊರತಾಗಿಯೂ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಕೆಲಸದಲ್ಲಿ ನಂಬಿಕೆ ಇಡುತ್ತೇವೆ. ಪ್ರಚಾರದಲ್ಲಲ್ಲ ಎಂದು ಅವರು ಪ್ರಧಾನಿಗೆ ಟಾಂಗ್ ನೀಡಿದ್ದಾರೆ. 
 
ಸಿಎಂ ಮೋದಿ ಅವರು ಮಾಡಿದ್ದ ಒಡಿಶಾ ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಟೀಕೆಗೆ ಪ್ರತ್ಯುತ್ತರ ನೀಡುತ್ತಿದ್ದ ಅವರು,

ವೆಬ್ದುನಿಯಾವನ್ನು ಓದಿ