ರಾತ್ರಿಪೂರ್ತಿ ಹೊರಗಿರುತ್ತಿದ್ದ ಪತ್ನಿಯ ಹತ್ಯೆಗೈದ ಪತಿಮಹಾಶಯ

ಬುಧವಾರ, 28 ಜನವರಿ 2015 (14:58 IST)
ಕಳೆದ ತಿಂಗಳು ಪಾಮ್ ಬೀಚ್ ರಸ್ತೆಯಲ್ಲಿ ಅರೆಸುಟ್ಟ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಆರಂಭದಲ್ಲಿ ಅದನ್ನು ಮರ್ಯಾದೆ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಪತಿಯೇ ಪತ್ನಿಯ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿತು.
 
ರಾತ್ರಿಪೂರ್ತಿ ಮನೆಯಿಂದ ಹೊರಗೆ ಇರುತ್ತಿದ್ದ ಪತ್ನಿ ಅನೈತಿಕ ಸಂಬಂಧ ಹೊಂದಿರಬಹುದು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಪತಿ ತನ್ನ ಪತ್ನಿಯ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಪತ್ನಿಯ ಹತ್ಯೆ ಮಾಡಿದ್ದಲ್ಲದೇ ಆಕೆಯ ಮೃತ ದೇಹವನ್ನು ಸುಟ್ಟುಹಾಕಲು ಪತಿ ಮಹಾಶಯ ವಿಫಲ ಪ್ರಯತ್ನ ನಡೆಸಿದ್ದಾನೆ. ಪ್ರಯತ್ನ ವಿಫಲವಾದಾಗ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ನೀಡಿದ್ದಾನೆ.
 
ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಪರಾರಿಯಾಗಿದ್ದ ಆರೋಪಿಯ ಸುಳಿವು ಹಿಡಿದ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಪತ್ನಿಯ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
 
ಆರೋಪಿ ಶಾಹಿದಲಿ ವಹಿದಲಿ ಖುರೇಶಿ ಕೇವಲ ಎರಡು ತಿಂಗಳುಗಳ ಹಿಂದೆ ನಗ್ಮಾಬಾಬು ಎನ್ನುವ ಮಹಿಳೆಯನ್ನು ವಿವಾಹವಾಗಿದ್ದನು. ಆದರೆ, ಮದುವೆಯಾದ ಮಾರನೇ ದಿನವೇ ಪತ್ನಿ ರಾತ್ರಪೂರ್ತಿ ಮನೆಯಿಂದ ಹೊರಗಡೆ ಇರುವುದು ಕಂಡು ಆಘಾತವಾಗಿ ಹಲವಾರು ಬಾರಿ ಆಕೆಯನ್ನು ಪ್ರಶ್ನಿಸಿದ್ದರು ಆಕೆ ಉತ್ತರ ನೀಡಿರಲಿಲ್ಲ. ಪ್ರತಿನಿತ್ಯ ಪತ್ನಿ ರಾತ್ರಿ ಹೊರಗಡೆ ಹೋಗುವುದನ್ನು ಕಂಡು ಆಕೆ ಅನೈತಿಕ ಚಟುವಟಿಕಗಳಲ್ಲಿ ಭಾಗಿಯಾಗಿರಬಹುದು ಎಂದು ಆಕ್ರೋಶದಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
 

ವೆಬ್ದುನಿಯಾವನ್ನು ಓದಿ