ಮುಂದಿನ ತಿಂಗಳು ಮೋದಿ- ಷರೀಫ್ ಭೇಟಿ ಸಾಧ್ಯತೆ

ಶುಕ್ರವಾರ, 19 ಫೆಬ್ರವರಿ 2016 (15:27 IST)
ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಮುಂದಿನ ತಿಂಗಳು ಭೇಟಿಯಾಗುವ ಸಾಧ್ಯತೆ ಇದೆ. 

ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಆಯೋಜಿಸಿರುವ ಪರಮಾಣು ಶೃಂಗಸಭೆಯಲ್ಲಿ ಭಾಗವಹಿಸಲಿರುವ ಉಭಯ ನಾಯಕರು, ಆ ಸಂದರ್ಭದಲ್ಲಿ ಭೇಟಿ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
 
ಮಾರ್ಚ್ 31 ಮತ್ತು ಏಪ್ರಿಲ್-1 ರಂದು ನಡೆಯಲಿರುವ ಪರಮಾಣು ಶೃಂಗಸಭೆಯಲ್ಲಿ ಭಾಗವಹಿಸಲು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನೀಡಿರುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ, ನವಾಜ್ ಷರೀಫ್ ಸ್ವೀಕರಿಸಿದ್ದಾರೆ.
 
ಶೃಂಗಸಭೆಯ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ನರೇಂದ್ರ ಮೋದಿ- ಷರೀಫ್ ಭೇಟಿ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.
 
ಆದರೆ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯ ಬಗೆಗಿನ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದಲ್ಲಿ ಯಾವುದೇ ಮಾತುಕತೆಗಳು ನಡೆದ ಮೇಲೆಯೇ ಅದು ನಡೆದ ಬಗ್ಗೆ ಹೇಳಲು ಸಾಧ್ಯ ಎಂದು ಪಾಕ್ ರಾಜತಾಂತ್ರಿಕ ಮೂಲಗಳು ಅಭಿಪ್ರಾಯ ಪಟ್ಟಿವೆ. 
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ 2010ರಲ್ಲಿ ಪ್ರಾರಂಭಿಸಿದ್ದ ಪರಮಾಣು ಶೃಂಗಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತ, ಪಾಕಿಸ್ತಾನ ಪ್ರಧಾನಿಗಳು ಭಾಗವಹಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ