ಕಾಶ್ಮಿರದಲ್ಲಿ ಶಾಂತಿಗಾಗಿ ಬದ್ಧ, ಆದ್ರೆ ಸಿಎಂ ಮುಫ್ತಿ ನಾಯಕತ್ವ ವಹಿಸಿಕೊಳ್ಳಲಿ: ಓಮರ್

ಸೋಮವಾರ, 11 ಜುಲೈ 2016 (19:44 IST)
ಕಾಶ್ಮಿರದಲ್ಲಿ ಶಾಂತಿಯನ್ನು ಸ್ಥಾಪಿಸಲು ತಮ್ಮ ಪಕ್ಷ ಸದಾ ಸಿದ್ದವಾಗಿದೆ. ಆದರೆ, ಮುಖ್ಯಮಂತ್ರಿಯಾಗಿ ನೀವು ನಾಯಕತ್ವ ವಹಿಸಬೇಕು ಎಂದು ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕರೆ ನೀಡಿದ್ದಾರೆ.
 
ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನಾಯಕತ್ವ ವಹಿಸಿಕೊಂಡು ಕಾಶ್ಮಿರದಲ್ಲಿ ಶಾಂತಿ ಸ್ಥಾಪನೆಗೆ ಮುಂದಾದಲ್ಲಿ ತಮ್ಮ ಪಕ್ಷ ಸಹಕಾರ ನೀಡಲಿದೆ. ಮುಖ್ಯಮಂತ್ರಿಯಾಗಿ ನೀವು ಮೊದಲು ಮುಂದಾಗಿ ಎಂದು ಟ್ವೀಟ್ ಮಾಡಿದ್ದಾರೆ. 
 
ಪಿಡಿಪಿ- ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ, ವಿಪಕ್ಷಗಳು ಮತ್ತು ಪ್ರತ್ಯೇಕತಾವಾದಿ ಗುಂಪುಗಳು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಸಹಕಾರ ನೀಡಬೇಕು ಎಂದು ನೀಡಿದ ಕರೆಗೆ ಸ್ಪಂದಿಸಿ ಟ್ವೀಟ್ ಮಾಡಿದ್ದಾರೆ.
 
ಜಮ್ಮು ಕಾಶ್ಮಿರದ ಪರಿಸ್ಥಿತಿ ತುಂಬಾ ಉದ್ರಿಕ್ತವಾಗಿದೆ. ಕಳೆದ 2010ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದ ಪ್ರತಿಭಟನೆಯಲ್ಲಿ ಸುಮಾರು 120 ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದರು.  ಸಿಎಂ ಮುಫ್ತಿಯವರೇ ನೀವು ನಾಯಕತ್ವವಹಿಸಿಕೊಳ್ಳಿ ನಾವು ನಿಮ್ಮನ್ನು ಹಿಂಬಾಲಿಸುತ್ತೇವೆ ಎಂದು ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ