ನೆಹರು ಭಾರತ ರತ್ನ ಪ್ರಶಸ್ತಿಗೆ ಅನರ್ಹರು: ಸರಕಾರ ಪ್ರಶಸ್ತಿ ಹಿಂದಕ್ಕೆ ಪಡೆಯಬೇಕು: ನೇತಾಜಿ ಕುಟುಂಬ

ಶನಿವಾರ, 25 ಏಪ್ರಿಲ್ 2015 (16:23 IST)
ನೇತಾಜಿ ಸುಭಾಶ್ ಚಂದ್ರ ಭೋಸ್ ಮತ್ತು ಅವರ ಕುಟುಂಬದ ಸದಸ್ಯರ ಚಲನವಲನಗಳ ಬಗ್ಗೆ ಕಾಂಗ್ರೆಸ್ ಪಕ್ಷ ಗೂಢಚಾರಿಕೆ ನಡೆಸುತ್ತಿತ್ತು ಎನ್ನುವ ಇತ್ತೀಚಿನ ವರದಿಗಳಿಂದ ಆಘಾತಗೊಂಡಿರುವ ನೇತಾಜಿ ಕುಟುಂಬ, ಅಂದಿನ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರಿಗೆ ನೀಡಲಾದ ಭಾರತ ರತ್ನ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದೆ.

ನೇತಾಜಿ ಕುಟುಂಬದ ವಕ್ತಾರರಾದ ಚಂದ್ರ ಕುಮಾರ್ ಭೋಸ್ ಮಾತನಾಡಿ, ಗೂಢಚಾರಿಕೆ ವರದಿಗಳು ಬಹಿರಂಗವಾದ ನಂತರ ನೆಹರು ನಡತೆಗಳು ಸಾರ್ವಜನಿಕವಾಗಿ ಬಹಿರಂಗವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ರತ್ನ ಪ್ರಶಸ್ತಿಯನ್ನು ಅತ್ಯುತ್ತಮ ನಾಗರಿಕರಿಗೆ ನೀಡಲಾಗುತ್ತಿದೆ. ಆದರೆ, ನೆಹರು ಅವರ ಕೀಳು ನಡತೆ ಬಹಿರಂಗವಾಗಿದ್ದರಿಂದ ಅವರು ಪ್ರಶಸ್ತಿ ಪಡೆಯಲು ಅರ್ಹರಲ್ಲ. ಅವರಿಂದ ಭಾರತ ರತ್ನ ಪ್ರಶಸ್ತಿಯನ್ನು ಸರಕಾರ ಹಿಂದಕ್ಕೆ ಪಡೆಯಬೇಕು ಎಂದು ದೇಶದ ಜನತೆ ಒತ್ತಾಯಿಸಬೇಕು ಎಂದು ಕರೆ ನೀಡಿದ್ದಾರೆ.

ಲೇಖಕ, ಸಂಶೋಧಕ ಅನುಜ್ ಧಾರ್ ಅವರ ದಾಖಲೆಗಳ ಪ್ರಕಾರ, 1948ರಿಂದ 1968ರ ವರೆಗೆ ಸುಮಾರು 20 ವರ್ಷಗಳ ಕಾಲ ನೇತಾಜಿ ಕುಟುಂಬದ ಸದಸ್ಯರಾದ ಸಿಸಿರ್ ಕುಮಾರ್ ಭೋಸ್, ಅಮಿಯಾ ನಾಥ್ ಭೋಸ್ ಹಾಗೂ ಭೋಸ್ ಕುಟುಂಬಕ್ಕೆ ಆತ್ಮಿಯರಾಗಿರುವ ವ್ಯಕ್ತಿಗಳ ಬಗ್ಗೆ ಗೂಢಚಾರಿಕೆ ನಡೆಸಲಾಗುತ್ತಿತ್ತು. 20 ವರ್ಷಗಳ ಗೂಢಚಾರಿಕೆ ಅವಧಿಯಲ್ಲಿ ನೆಹರು 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.    

ವೆಬ್ದುನಿಯಾವನ್ನು ಓದಿ