ಗುಜರಾತಿನಲ್ಲಿ ಸರಕಾರಿ ಉದ್ಯೋಗಿಯಾಗಿರುವ ಪಂಕಜ್ ಮೋದಿ ಈ ಮೊದಲು ಇಕ್ಕಟ್ಟಾದ ಪುಟ್ಟ ಮನೆಯಲ್ಲಿ 95 ರ ಹರೆಯದ ತಾಯಿ ಹೀರಾಬಾ ಮತ್ತು ತಮ್ಮ ಪರಿವಾರದ ಇತರ ಸದಸ್ಯರೊಂದಿಗೆ ವಾಸವಾಗಿದ್ದರು. ಆ ಮನೆಯನ್ನು ತೆರವುಗೊಳಿಸಿರುವ ಅವರೀಗ ಗಾಂಧೀನಗರದ ರೈಸನ್ ಪ್ರದೇಶದಲ್ಲಿರುವ ಹೊಸ ಮನೆಗೆ ಹೋಗಿದ್ದಾರೆ. ಈ ಮನೆ ಸಂಪೂರ್ಣವಾಗಿ ಸುಸಜ್ಜಿತವಾಗಿದ್ದು, ಮನೆ ಹೊರಗೆ ಭದ್ರತಾ ಸಿಬ್ಬಂದಿಯನ್ನು ಕಾವಲಿರಿಸಲಾಗಿದೆ.