ಹೊಸ ನೋಟುಗಳು ಹೆಚ್ಚು ಸುರಕ್ಷಿತ

ಶುಕ್ರವಾರ, 11 ನವೆಂಬರ್ 2016 (10:23 IST)
ಕೇಂದ್ರ ಸರ್ಕಾರ ಚಲಾವಣೆ ತಂದಿರುವ ಹೊಸ 500 ಮತ್ತು 2,000 ರೂ ಮುಖಬೆಲೆಯ ನೋಟುಗಳು ಸದ್ಯ ಚಲಾವಣೆಯಲ್ಲಿರುವ ನೋಟುಗಳಿಗಿಂತಲೂ ಹೆಚ್ಚು ಸುರಕ್ಷತಾ ಗುಣಗಳನ್ನು ಹೊಂದಿವೆ.

ಗುರುವಾರದಿಂದ ಬ್ಯಾಂಕ್‌ಗಳು ಹೊಸ ನೋಟುಗಳನ್ನು ಗ್ರಾಹಕರಿಗೆ ವಿತರಣೆ ಮಾಡುತ್ತಿದ್ದು ಇವು ಹಳೆಯ ನೋಟುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. 
 
ಬೂದು ಬಣ್ಣದಲ್ಲಿರುವ 500ರ ನೋಟುಗಳು ದೆಹಲಿಯ ಕೆಂಪುಕೋಟೆ ಚಿತ್ರವನ್ನು ಹೊಂದಿವೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪರಿಚಯವಾಗುತ್ತಿರುವ 2,000 ಮುಖಬೆಲೆ ನೋಟು ಹಿಂದಿನ ನೋಟುಗಳಂತೆ ಗಾಂಧಿ ಭಾವಚಿತ್ರ ಮತ್ತು ದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಮಂಗಳಯಾನದ ಚಿತ್ರವನ್ನು ಹೊಂದಿದೆ.
 
ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಜಾರಿಗೆ ತಂದಿರುವ 500 ಮತ್ತು 1,000ರೂಪಾಯಿಗಳನ್ನು ಪಾಕಿಸ್ತಾನ ಸೇರಿದಂತೆ ಯಾರು ಕೂಡ ನಕಲು ಮಾಡುವುದು ಕಷ್ಟ. ನಾವಿದನ್ನು ಸತತ 6 ತಿಂಗಳಿಂದ ಪರಿಶೀಲಿಸಲಿದ್ದೇವೆ ಎಂದಿರುವ ಗುಪ್ತಚರ ಇಲಾಖೆ ಈ ನೋಟಿನಲ್ಲಿ ಅಂತಹ ವಿಶೇಷತೆ ಏನಿದೆ ಎಂಬುದನ್ನು ಮಾತ್ರ ಬಹಿರಂಗ ಪಡಿಸಲು ನಿರಾಕರಿಸಿದೆ.
 
500 ಮತ್ತು 1,000ರೂಪಾಯಿಗಳ ಮೇಲೆ ನಿಷೇಧ ಹೇರಿರುವುದಿಂದ ಪಾಕಿಸ್ತಾನದಲ್ಲಿ ಮುದ್ರಣಗೊಂಡು ಉಗ್ರರಿಗೆ ಪೂರೈಸಲಾಗುತ್ತಿದ್ದ ನಕಲಿ ನೋಟಿನ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ