ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ರೂಪದರ್ಶಿ ಆತ್ಮಹತ್ಯೆ

ಭಾನುವಾರ, 27 ಮಾರ್ಚ್ 2016 (22:58 IST)
25 ವರ್ಷದ ರೂಪದರ್ಶಿಯೊಬ್ಬಳು ಮದುವೆಯಾದ ಒಂದು ತಿಂಗಳಲ್ಲೇ ದಕ್ಷಿಣ ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಪತ್ನಿಗೆ ವರದಕ್ಷಿಣೆಗಾಗಿ ಚಿತ್ರಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದನೆಂದು ಯುವತಿಯ ಕುಟುಂಬ ಆರೋಪಿಸಿದ ನಂತರ ಅನೇಕ ಪಬ್‌ಗಳ ಮಾಲೀಕರಾಗಿರುವ ಅವಳ ಪತಿಯನ್ನು ಬಂಧಿಸಲಾಗಿದೆ. 
 
ನಿತಿನ್ ಚಾವಲಾ ಪತ್ನಿ ಪ್ರಿಯಾಂಕ ಕಪೂರ್ ಶನಿವಾರ ಬೆಳಿಗ್ಗೆ ಡಿಫೆನ್ಸ್ ಕಾಲೋನಿಯ ಬೀಗಹಾಕಿದ ಫ್ಲಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕಪೂರ್ ಫೋನ್ ಕರೆ ಸ್ವೀಕರಿಸದಿದ್ದಾಗ ಅವಳ ಕುಟುಂಬ ಪೊಲೀಸರನ್ನು ಸಂಪರ್ಕಿಸಿತು. ಬಳಿಕ ಫ್ಲಾಟ್‌ನಲ್ಲಿ ಒಳಗಿನಿಂದ ಚಿಲಕ ಹಾಕಿದ್ದನ್ನು ಕಂಡು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಾಗಿಲು ಒಡೆದು ಒಳಕ್ಕೆ ಹೊ ಕ್ಕಾಗ ಕಪೂರ್ ನೇಣು ಹಾಕಿಕೊಂಡಿದ್ದಳು.
 
ಚಾವಲಾ ಪತ್ನಿಗೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡುತ್ತಿದ್ದ, ಥಳಿಸುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಎಂದು  ಕಪೂರ್ ಸೋದರಿ ಡಿಂಪಿ ಆರೋಪಿಸಿದ್ದಾಳೆ. ಕಪೂರ್ ಬರೆದಿಟ್ಟ ಸೂಸೈಟ್ ನೋಟ್‌ನಲ್ಲಿ ಕೂಡ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾಳೆ. ಕಪೂರ್ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ನಡೆಸುತ್ತಿದ್ದು ಚಾವಲಾ ಎರಡನೇ ಪತ್ನಿಯಾಗಿದ್ದಾರೆ. ಚಾವಲ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಪ್ರಿಯಾಂಕಳನ್ನು ಮದುವೆಯಾಗಿದ್ದ. 

ವೆಬ್ದುನಿಯಾವನ್ನು ಓದಿ