ಬಂಧಿತನಾದ ಭಿಕ್ಷುಕ ಕೋಟ್ಯಾಧಿಪತಿ ಎಂದು ಗೊತ್ತಾದಾಗ...!

ಸೋಮವಾರ, 28 ಜುಲೈ 2014 (18:56 IST)
ಸೌದಿ ಅರಬ್‌‌‌ನಲ್ಲಿ ಪೋಲಿಸರು ಅನುಮಾನಗೊಂಡ ಒಬ್ಬ ಬಿಕ್ಷುಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಬಿಕ್ಷುಕನಲ್ಲ ಒಬ್ಬ ಕೋಟ್ಯಾಧಿಪತಿ ಎಂದು ಗೊತ್ತಾದಾಗ ಪೋಲಿಸರು ಬೆಚ್ಚಿ ಬಿದ್ದಿದ್ದಾರೆ. 
 
ಸೌದಿ ಗೆಜೆಟ್‌ ವರದಿ ಪ್ರಕಾರ, ಪೋಲಿಸರು ಪಶ್ಚಿಮ ಸೌದಿ ಅರಬ್‌‌ನ ಯಾಂಬೂ ಪಟ್ಟಣದ ಅರಬ್‌ ಮೂಲದ ಈ ಬಿಕ್ಷುಕನಿಂದ 1.92 ಕೋಟಿ ರೂಪಾಯಿ ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಕ್ಷೆ ಬೇಡುತ್ತಿರುವಾಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮದೀನಾ ವಕ್ತಾರ ಫಹದ್‌ ಅಲ್‌-ಗಾನಮ್‌ ತಿಳಿಸಿದ್ದಾರೆ. 
 
ಸೌದಿ ಅರಬ್‌ ದೇಶದಲ್ಲಿ ಭಿಕ್ಷೆ ಬೇಡುವುದು ನಿಷೇಧವಿದೆ. ಆರೋಪಿ ಭಿಕ್ಷುಕ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಮತ್ತು ಬೇರೆ ನಗರಗಳಿಗೆ ಭಿಕ್ಷಾಟನೆಗಾಗಿ ತೆರಳಲು ಕಾರನ್ನು ಬಳಸುತ್ತಿದ್ದನು. ಈತನಿಗೆ ಬಿಕ್ಷೆ ಬೇಡಲು ಈತನ ಹೆಂಡತಿ ಮತ್ತು ಮೂರು ಮಕ್ಕಳು ಸಹಾಯ ಮಾಡುತ್ತಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.
 
ಭಿಕ್ಷುಕನ ಪರಿವಾರದ ಎಲ್ಲಾ ಸದಸ್ಯರು ಸೌದಿ ಅರಬ್‌‌‌ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಮದೀನಾ ವಕ್ತಾರ ಗಾನಮ್‌ ಪ್ರಕಾರ, ದೇಶದ ಪೌರತ್ವದ ಲೈಸೆನ್ಸ್‌ ಅಕ್ರಮವಾಗಿ‌‌ ಪಡೆಯುವಲ್ಲಿ ಕೋಟ್ಯಾಧಿಪತಿ ಭಿಕ್ಷುಕ ಸಫಲನಾಗಿದ್ದ. ಪೋಲಿಸರು ಆರೋಪಿಯನ್ನು ಸಂಪೂರ್ಣವಾಗಿ ವಿಚಾರಣೆ ನಡೆಸಿದಾಗ ಆತ ಸೌದಿ ಮೂಲದವನಲ್ಲ ಎನ್ನುವುದು ಬಹಿರಂಗವಾಗಿದೆ. 

ವೆಬ್ದುನಿಯಾವನ್ನು ಓದಿ