ಮುಂಬರುವ ದಿನಗಳು ಜ್ಞಾನ ಮತ್ತು ತಂತ್ರಜ್ಞಾನದ ಯುಗಗಳಾಗಲಿವೆ ಮೋದಿ

ಬುಧವಾರ, 19 ನವೆಂಬರ್ 2014 (20:55 IST)
ಭಾರತ ಮತ್ತೆ ‘ವಿಶ್ವಗುರು’ ಪಾತ್ರ ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  ಅಭಿಪ್ರಾಯಪಟ್ಟಿದ್ದಾರೆ.
 
ವಿದೇಶಿ ಪ್ರವಾಸದ ಅಂಗವಾಗಿ ಫಿಜಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ  ಸಂವಾದ ನಡೆಸಿದ ಅವರು, ಮನುಕುಲ ಒಳತಿಗೆ ಪ್ರಜಾಪ್ರಭುತ್ವ ಹಾಗೂ ಯುವ ಜನತೆಯ ಬಲವನ್ನು ಭಾರತ ಉಪಯೋಗಿಸಿಕೊಳ್ಳಲಿದೆ ಎಂದು ನುಡಿದರು.
 
ಮುಂಬರುವ ದಿನಗಳು ಜ್ಞಾನ ಮತ್ತು ತಂತ್ರಜ್ಞಾನದ ಯುಗ ಎನಿಸಲಿದ್ದು, ಹೊಸ ಅನ್ವೇಷಣೆ ಹಾಗೂ ಶೋಧಗಳಲ್ಲಿ ವೇಗವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಮೋದಿ ಅವರು ಅಭಿಪ್ರಾಯ ಪಟ್ಟರು.
 
ಭಾರತದ ಹಿಂದಿನ ಋಷಿಮುನಿಗಳು ದೇಶದ ಜಾಗತಿಕ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಿದ್ದರು. ಮುಂಬರುವ ‘ಜ್ಞಾನ ಯುಗ’ದಲ್ಲಿ ಭಾರತವು ‘ವಿಶ್ವಗುರು’ವಿನ ಪ್ರಧಾನ ಪಾತ್ರವಹಿಸಲಿದೆ ಎಂದಿದ್ದಾರೆ.
 
ಪ್ರಧಾನಿನರೇಂದ್ರ ಮೋದಿ ಅವರ 10 ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಬುಧವಾರ ಅಂತ್ಯಕಂಡಿದೆ.
 
ಈ ಅವಧಿಯಲ್ಲಿ ಮೋದಿ ಅವರು ಮ್ಯಾನ್ಮಾರ್‌ನಲ್ಲಿ ನಡೆದ ಪೂರ್ವ ಏಷ್ಯಾ ಹಾಗೂ ಆಸಿಯಾನ್ ಶೃಂಗಗಳಲ್ಲಿ ಪಾಲ್ಗೊಂಡಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿ ನಂತರ ಫಿಜಿ ರಾಷ್ಟ್ರದ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಮರಳಿ ಪ್ರಯಾಣ ಬೆಳೆಸಿದ್ದಾರೆ.

ವೆಬ್ದುನಿಯಾವನ್ನು ಓದಿ