ಜಮ್ಮು ಕಾಶ್ಮೀರದ ಮುಂದಿನ ಸಿಎಂ ಬಿಜೆಪಿಯವರಾಗಿರುತ್ತಾರೆ: ಅಮಿತ್ ಶಾ

ಶುಕ್ರವಾರ, 21 ನವೆಂಬರ್ 2014 (17:33 IST)
ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿಜೆಪಿಯ ಅಭ್ಯರ್ಥಿಯೇ ಆಗಿರಲಿದ್ದಾರೆ ಎಂದು ಹೇಳಿದ್ದಾರೆ.

ಬನಿಹಾಲ್‌ ಮತ್ತು ರಾಮ‌ಬನ್‌ನಲ್ಲಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು  ರಾಜ್ಯದಲ್ಲಿ ಬಿಜೆಪಿ ಯೋಜಿಸಿಕೊಂಡಿರುವ 44+ ಚುನಾವಣಾ ಅಜೆಂಡಾ ವಿಧಾನಸಭಾ ಚುನಾವಣೆಯಲ್ಲಿ ವಾಸ್ತವಿಕತೆ ಪಡೆಯಲಿದ್ದು, ಜಮ್ಮು ಕಾಶ್ಮೀರದ ಮುಂದಿನ ಮುಖ್ಯಮಂತ್ರಿ ನಮ್ಮ ಪಕ್ಷದವರೇ ಆಗಿರುತ್ತಾರೆ ಎಂದು ಒತ್ತಿ ಹೇಳಿದ್ದಾರೆ.
 
ಕಾಶ್ಮೀರದಲ್ಲಿ 60 ವರ್ಷಗಳಿಂದ ಚಾಲ್ತಿಯಲ್ಲಿರುವ ವಂಶಾಡಳಿತವನ್ನು ಟೀಕಿಸಿದ ಅವರು ಕಾಂಗ್ರೆಸ್‌ನ ಈ ದೀರ್ಘಕಾಲದ ಆಡಳಿತ ಕಾಶ್ಮೀರವನ್ನು ರೋಗಗ್ರಸ್ಥವನ್ನಾಗಿಸಿದೆ ಎಂದು ಹೀಗಳೆದಿದ್ದಾರೆ. 
 
ಸಾಮ್ರಾಜ್ಯಶಾಹಿ ಆಳ್ವಿಕೆಯನ್ನು ಕೊನೆಗೊಳಿಸಿ ಪ್ರಗತಿ ಮತ್ತು ಅಭಿವೃದ್ಧಿಯ ಆಳ್ವಿಕೆ ನೀಡಲು ನಾವು ಬದ್ಧರಾಗಿದ್ದೇವೆ,"  ಎಂದು ಅವರು ಹೇಳಿದ್ದಾರೆ.
 
ತಮ್ಮ ಭಾಷಣದಲ್ಲಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯ ವಿವಾದದ ಕುರಿತು ಸ್ಪಷ್ಟನೆ ನೀಡಿದರು.
 
ಕಣಿವೆ ನಾಡಿನಲ್ಲಿ 5 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 25 ರಂದು (ಪ್ರಥಮ ಹಂತದ ಚುನಾವಣೆ)  ಬನಿಲಾಲ್ ಮತ್ತು ರಾಮ್‌ಬನ್‌ನಲ್ಲಿ ಮತದಾನ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ