ಐಸಿಸ್‌‍ನಂತೆ ಉಗ್ರಗಾಮಿ ಸಂಘಟನೆ ರಚಿಸಲು ಯತ್ನಿಸುತ್ತಿದ್ದ ಆರೋಪಿ ಬಂಧನ

ಭಾನುವಾರ, 7 ಫೆಬ್ರವರಿ 2016 (12:48 IST)
ಐಸಿಎಸ್ ಉಗ್ರಗಾಮಿ ಸಂಘಟನೆಯಿಂದ ಪ್ರೇರಣೆಗೊಂಡು ಜಿಹಾದಿ ಹೋರಾಟಕ್ಕಾಗಿ ಉಗ್ರಗಾಮಿ ಸಂಘಟನೆ ಆರಂಭಿಸಲು ಯುವಕರನ್ನು ಪ್ರೇರೇಪಿಸುತ್ತಿದ್ದ ಅಬ್ದುಸ್ ಸಮಿ ಖಾಸ್ಮಿ ಎನ್ನುವ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
 
ಉತ್ತರಪ್ರದೇಶದ ಭಯೋತ್ಪಾದನೆ ನಿಗ್ರಹ ದಳದ ಬೆಂಬಲದಿಂದ ಆರೋಪಿಯನ್ನು ಬಂಧಿಸಲಾಗಿದೆ. ಐಸಿಸ್ ಬೆಂಬಲಿತ 20 ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಅಬ್ದುಸ್ ಸಮಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು 10 ದಿನಗಳ ಕಾಲ ಪೊಲೀಸ್ ವಶಕ್ಕೆ ವಿಚಾರಣೆಗಾಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ದೇಶದಲ್ಲಿ ಜಿಹಾದಿ ಹೋರಾಟ ನಡೆಸಲು ಐಸಿಸ್‌ನಂತೆ ಉಗ್ರಗಾಮಿ ಸಂಘಟನೆ ಆರಂಭಿಸಲು ಆರೋಪಿ ಅಬ್ದುಸ್ ಸಮಿ ಸಿದ್ದತೆ ನಡೆಸಿದ್ದ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ