ಕಾನೂನು ಗಾಳಿಗೆ ತೂರಿದ 230 ಸಂಸದರು: ಮೋದಿ ಮೌನಕ್ಕೆ ಶರಣು

ಬುಧವಾರ, 20 ಆಗಸ್ಟ್ 2014 (19:04 IST)
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಮ್‌ವಿಲಾಸ್ ಪಾಸ್ವಾನ್ ಸೇರಿದಂತೆ ಸುಮಾರು 230 ಸಂಸದರು ಕಾನೂನು ಉಲ್ಲಂಘಿಸಿರುವುದು ಬಹಿರಂಗವಾಗಿದೆ. ಸರಕಾರಿ ಬಂಗಲೆಯಲ್ಲಿ ಅನುಮತಿಯಿಲ್ಲದೆ ಮನೆಗಳನ್ನು ಆಧುನೀಕರಣಗೊಳಿಸಲಾಗಿದೆ .ಕೆಲವರು ಮನೆಯ ಬಾಗಿಲು ಮುರಿದಿದ್ದಾರೆ ಮತ್ತು ಅಡುಗೆ ಮನೆ ದೊಡ್ಡದನ್ನಾಗಿಸಿಕೊಂಡಿದ್ದಾರೆ, ಒಬ್ಬರು ಬ್ಯಾಡ್ಮಿಂಟನ್‌‌ ಕೋರ್ಟ್‌ ಸಿದ್ದಪಡಿಸಿದ್ದಾರೆ ಈ ಪರಿಸ್ಥಿತಿ ಯಾವುದೆ ಡಿಡಿಎ ಕಾಲೋನಿಯದ್ದಲ್ಲ, ಲುಟಿಯನ್ಸ್‌ ಜೋನ್‌ ನಲ್ಲಿರುವ ಹೆರಿಟೇಜ್‌‌ ಬಿಲ್ಡಿಂಗ್‌‌ನದ್ದಾಗಿದೆ. 
 
ಲುಟಿಯನ್ಸ್‌‌ ಜೊನ್‌‌‌‌ನ ಸರಕಾರಿ ಬಂಗಲೆಯಲ್ಲಿ ಸೆಂಟ್ರಲ್‌‌ ಪಬ್ಲಿಕ್‌ ಡಿಪಾರ್ಟ್‌‌ಮೆಂಡ್‌‌‌ ಅನುಮತಿಯಿಲ್ಲದೆ ಈ ರೀತಿ ಮಾಡಲಾಗಿದೆ. ಈ ರೀತಿಯ ಯಾವುದೇ ಬದಲಾವಣೆ ಮಾಡಬೇಕೆಂದರೆ, ಅದರ ಅಧಿಕಾರ ಕೇವಲ ಸಿಪಿಡಬ್ಲ್ಯೂಡಿಗೆ ಮಾತ್ರವಿದೆ. ನಿಯಮಗಳ ಪ್ರಕಾರ ಈ ಪ್ರದೇಶದ ಸರಕಾರಿ ಬಂಗಲೆಗಳಲ್ಲಿ ಯಾವುದೇ ಬದಲಾವಣೆ ಮಾಡಬಾರದು, ಆದರೆ ಕಳೆದ 10 ವರ್ಷಗಳಲ್ಲಿ ಕಡಿಮೆ ಎಂದರೆ 230 ಸಂಸದರು ಈ ಬಂಗಲೆಯಲ್ಲಿ ಬದಲಾವಣೆ ಮಾಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. 
 
ಈ ಬಂಗಲೆಯನ್ನು ಕಾನೂನುಬಾಹಿರವಾಗಿ ಆಧುನಿಕರಣಗೊಳಿಸಿದ  ಸಂಸದರ ಪಟ್ಟಿಯಲ್ಲಿ ನಿತಿನ್‌ ಗಡ್ಕರಿ, ಕಲರಾಜ್‌ ಮಿಶ್ರಾ, ಯಶವಂತ್‌ ಸಿನ್ಹಾ, ರಾಮವಿಲಾಸ್‌ ಪಾಸ್ವಾನ್‌‌, ಅಹ್ಮದ್‌ ಪಟೇಲ್‌, ಸುರೇಶ ಕಲ್ಮಾಡಿ ಇದ್ದಾರೆ. 
4000 ಚದುರ ಅಡಿಯಿಂದ 5,000 ಚದುರ ಅಡಿವರೆಗಿನ ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಮಾಡಲಾಗಿದೆ ಮತ್ತು ಹಲವು ವರ್ಷಗಳಿಂದ ಇದು ಹೇಗೆ ನಡೆಯಿತ್ತಿದೆಯೋ ಈಗಲೂ ಹಾಗೆ ನಡೆಯುತ್ತಿದೆ ಎಂದು ಆರ್‌ಟಿಐ ನಿಂದ ಬಹಿರಂಗವಾಗಿದೆ. 
 
ಮಂತ್ರಿಗಳು ಬಂಗಲೆಯ 8,250 ಚದುರ ಅಡಿಯ ಪ್ಲ್ಯಾಟ್‌‌‌‌ನಲ್ಲಿದ್ದಾರೆ. ಇದರಲ್ಲಿ 8 ಬೆಡ್‌ ರೂಮ್‌‌, ಮನೆಗೆಲಸದವರಿಗಾಗಿ ನಾಲ್ಕು ಕೋಣೆ ಮತ್ತು ಎರಡು ಗ್ಯಾರೇಜ್ ಇರುತ್ತವೆ. ಈ ಬಂಗಲೆಗಳ ಎದುರುಗಡೆ ಮತ್ತು ಹಿಂದೆ ಬಾಲ್ಕೋನಿಯಂತೆ ಸ್ಥಳ ಇರುತ್ತದೆ. 
  
ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ತೀನಮೂರ್ತಿ ಲೈನ್‌‌ನಲ್ಲಿರುವ ಬಂಗಲೆ ನಂಬರ್‌ 13 ರಲ್ಲಿ ಇರುತ್ತಿದ್ದರು. ಅಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಎದುರುಗಡೆ ಒಂದು ಕೋಣೆ, ಹಿಂದೆ ಒಂದು ಕೋಣೆ ಮತ್ತು ಸರ್ವೆಂರ್ಟ್ಸ್‌‌ ಕ್ವಾರ್ಟ್ಸ್‌‌‌ ಹತ್ತಿರವೊಂದು ಕೋಣೆ ಕಟ್ಟಿದ್ದಾರೆ. ಈ ರೀತಿ 1,000 ಚದುರ ಅಡಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ. 10, ತಾಲ್‌‌ಕಟೊರಾ ರಸ್ತೆಯಲ್ಲಿ ಬಿಜೆಪಿ ನಾಯಕ ಶತೃಘ್ನ ಸಿನ್ಹಾ ಬಂಗಲೆಯಲ್ಲಿ 1,173 ಚದುರ ಅಡಿಯಲ್ಲಿ ಒಂದು ಕೋಣೆ ಮತ್ತು ಒಂದು ಕಚೇರಿ ನಿರ್ಮಿಸಿದ್ದಾರೆ. 
 
ಮಾಜಿ ಮಂತ್ರಿ ಸುರೇಶ್‌ ಕಲ್ಮಾಡಿ ತಮ್ಮ ಬಂಗಲೆಯಲ್ಲಿ ಒಂದು ಕಚೇರಿ, ಕೋಣೆ ಮತ್ತು ಶೆಡ್‌‌ ನಿರ್ಮಿಸಿದ್ದಕ್ಕಾಗಿ, ಅವರಿಗೆ ನೋಟಿಸ್‌ ನೀಡಲಾಗಿತ್ತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ್‌ ಕಲರಾಜ್ ಮಿಶ್ರಾ ತಮಗೆ ನೀಡಲಾದ ಸರಕಾರಿ ಬಂಗಲೆಯಲ್ಲಿ ಒಂದು ಬ್ಯಾಡ್ಮಿಂಟ್‌‌ನ ಕೋರ್ಟ್‌‌ ನಿರ್ಮಿಸಿದ್ದಕ್ಕಾಗಿ 2006ರಲ್ಲಿ ಸಿಪಿಡಬ್ಲ್ಯೂಡಿ  ನೋಟಿಸ್‌ ಜಾರಿ ಮಾಡಿತ್ತು. ಇವರ ಮನೆಯಲ್ಲಿ 3,000 ವರ್ಗ ಅಡಿಯಲ್ಲಿ ತಾತ್ಕಾಲಿಕ ಶೆಡ್ಸ್‌‌‌ ಮತ್ತು ಶೌಚಾಲಯ ಕೂಡ ನಿರ್ಮಿಸಿಕೊಂಡಿದ್ದರು. ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ರಾಮ್‌‌ ವಿಲಾಸ್ ಪಾಸ್ವಾನ್‌‌ರ ಬಂಗಲೆಯಲ್ಲಿ ಎರಡು ಅಕ್ರಮವಾದ ಕ್ಯಾಬಿನ್‌‌ಗಳಿದ್ದವು. 
 
ಪ್ರಸಕ್ತ ನಿಯಮಗಳ ಅಡಿಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ನೋಟಿಸು ಜಾರಿಮಾಡಲಾಗಿದೆ. ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ತೆರವುಗೊಳಿಸದಿದ್ದರೆ ಅಲಾಟ್‌ಮೆಂಟ್‌‌ ರದ್ದುಗೊಳಿಸುವ ಮತ್ತು ಬಂಗಲೆ ಖಾಲಿ ಮಾಡುವ ಕಾರ್ಯಾಚರಣೆ ಪ್ರಾರಂಭ ವಾಗುತ್ತದೆ. ಆದರೆ, ಈ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೂಡ ಆರೋಪಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ