ನಿತೀಶ್ ಕುಮಾರ್ ಜಂಗಲ್ ರಾಜ್, ಭ್ರಷ್ಟಾಚಾರದ ಸಂರಕ್ಷಕ: ಅಮಿತ್ ಶಾ

ಶನಿವಾರ, 10 ಅಕ್ಟೋಬರ್ 2015 (19:07 IST)
ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರ ಬಿಹಾರ್ ರಾಜ್ಯವನ್ನು ಅಭಿವೃದ್ಧಿಪಡಿಸಿ ಉತ್ತಮ ಅಡಳಿತ ನೀಡಿಲ್ಲ. ಒಂದು ಭುಜದಲ್ಲಿ ಆರ್‌ಜೆಡಿ ಭ್ರಷ್ಟಾಚಾರ ಮತ್ತೊಂದು ಭುಜದ ಮೇಲೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ಹೊತ್ತುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
 
ಒಂದು ವೇಳೆ ನಿತೀಶ್ ಮತ್ತು ಲಾಲು ಒಂದಾದಲ್ಲಿ ಬಿಹಾರ್ ಅಭಿವೃದ್ಧಿ ಸಾಧ್ಯವಿಲ್ಲ ಎಂದು ನವಡಾ ಜಿಲ್ಲೆಯ ರಾಜೌಲಿ ಪಟ್ಟಣದಲ್ಲಿ ಚುನಾವಣೆ ಪ್ರಚಾರದ ಅಂಗವಾಗಿ ಶಾ ಭಾಷಣ ಮಾಡಿದರು.  
 
ರಾಜ್ಯದಲ್ಲಿ ಜಂಗಲ್ ರಾಜ್ ನಡೆಸಿದ ಲಾಲು ಯಾದವ್ ಮತ್ತು ಬಹುಕೋಟಿ ಹಗರಣದ ರೂವಾರಿಯಾದ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯಿಂದ ನಿತೀಶ್ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಸಾದ್ಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
 
ಜಂಗಲ್ ರಾಜ್ ರೂವಾರಿ ಲಾಲು ಯಾದವ್‌ರನ್ನು ತಮ್ಮ ಹಿಂದೆ ಅಡಗಿಸಿಕೊಂಡು ನಿತೀಶ್ ಕುಮಾರ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಅವರಿಬ್ಬರು ಒಂದಾದಲ್ಲಿ ರಾಜ್ಯಕ್ಕೆ ಅಚ್ಚೇ ದಿನ್ ಬರುವ ಭರವಸೆಯಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಕೇವಲ ಅಧಿಕಾರಕ್ಕಾಗಿ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಒಂದಾಗಿದ್ದಾರೆ. ಕಳೆದ 25 ವರ್ಷಗಳಿಂದ ಲಾಲು ಮತ್ತು ನಿತೀಶ್ ರಾಜ್ಯದಲ್ಲಿ ಅಧಿಕಾರ ನಡೆಸಿದ್ದರೂ ಬಿಹಾರ್ ಇವತ್ತಿಗೂ ಅತ್ಯಂತ ಹಿಂದುಳಿದ ರಾಜ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ