9 ಗಂಟೆಯಲ್ಲಿ 1,000 ದೂರನ್ನು ಆಲಿಸಿದ ನಿತೀಶ್ ಕುಮಾರ್

ಮಂಗಳವಾರ, 2 ಫೆಬ್ರವರಿ 2016 (16:45 IST)
ತಮ್ಮ ಸಾರ್ವಜನಿಕರೊಂದಿಗಿನ ಮಾತುಕತೆ ಕಾರ್ಯಕ್ರಮ 'ಜನತಾ ದರ್ಬಾರ್‌ನಲ್ಲಿ ಮುಖ್ಯಮಂತ್ರಿ' ಯನ್ನು ಮುಂದುವರೆಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ಬೆಳಿಗ್ಗೆಯಿಂದ ಸಂಜೆಯವರೆಗೂ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. 9 ತಾಸುಗಳ ಕಾಲ 1,000ಕ್ಕಿಂತ ಹೆಚ್ಚು ದೂರುಗಳು ಕೇಳಿ ಬಂದವು ಎಂದು ತಿಳಿದು ಬಂದಿದೆ. 

ಒಟ್ಟು 9 ತಾಸುಗಳ ಕಾಲ 218 ಜನ ಮಹಿಳೆಯರು ಸೇರಿದಂತೆ 10007 ಜನರ ದೂರನ್ನು ಸಿಎಂ ಆಲಿಸಿದರು ಎಂದು ಮುಖ್ಯಮಂತ್ರಿ ಕಾರ್ಯಾಲಯ ಹೇಳಿಕೆ ನೀಡಿದೆ. 
 
ಮಹಾಮೈತ್ರಿಕೂಟ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನತಾ ದರ್ಬಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. 
 
ಪೊಲೀಸ್ ವ್ಯವಸ್ಥೆ, ಭೂಸುಧಾರಣೆ, ಸಾಮಾನ್ಯ ಆಡಳಿತ, ಮತ್ತು ನೋಂದಣಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಕೇಳಿ ಬಂದಿದ್ದು, ಈ ಕುರಿತು ಪರಿಶೀಲಿಸಿ ದೂರುದಾರರಿಗೆ ಸಹಾಯ ಮಾಡುವಂತೆ ಪೊಲೀಸ್ ಮುಖ್ಯಸ್ಥ ಪಿ.ಕೆ. ಠಾಕೂರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. 
 
2005ರಲ್ಲಿ ನಿತೀಶ್ ಅವರು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ಪ್ರತಿ ತಿಂಗಳ ಮೊದಲ ಮೂರು ಸೋಮವಾರ ಅವರು ಜನರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸುತ್ತಾರೆ. 
 

ವೆಬ್ದುನಿಯಾವನ್ನು ಓದಿ