ಜನತಾ ಪರಿವಾರ ಒಡೆದಿದ್ದೇ ನಿತೀಶ್ ಕುಮಾರ್: ಮುಲಾಯಂ ಆಕ್ರೋಶ

ಸೋಮವಾರ, 12 ಅಕ್ಟೋಬರ್ 2015 (16:35 IST)
ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಜೆಡಿ(ಯು) ಮುಖಂಡ, ಬಿಹಾರ್ ಸಿಎಂ ನಿತೀಶ್ ಕುಮಾರ್ ನಮ್ಮ ಬೆಂಬಲ ಯಾಚಿಸಿದ್ದರು. ನಾವು ಮೈತ್ರಿಗೆ ಒಪ್ಪಿದಾಗ, ಸೋನಿಯಾ-ರಾಹುಲ್ ಜೊತೆ ರಹಸ್ಯ ಮಾತುಕತೆ ನಡೆಸಿ ನಮ್ಮನ್ನು ವಂಚಿಸಿದರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ  
 
ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಿಹಾರ್ ಜನತೆ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು, ನಿತೀಶ್ ಮತ್ತು ಲಾಲು ಮೈತ್ರಿಕೂಟವಾದ ಜನತಾ ಪರಿವಾರವನ್ನೂ ತರಾಟೆಗೆ ತೆಗೆದುಕೊಂಡರು.
 
ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ನಿತೀಶ್ ಕುಮಾರ್, ದಿವಂಗತ ರಾಮ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಕನಸುಗಳನ್ನು ನುಚ್ಚು ನೂರಾಗಿಸಿದರು ಎಂದು ಕಿಡಿಕಾರಿದರು. 
 
ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಅವರ ವಂಚನೆಯಿಂದಾಗಿ ಸಮಾಜವಾದಿ ಪಕ್ಷ ಜನತಾ ಪರಿವಾರ ಮೈತ್ರಿಕೂಟದಿಂದ ಹೊರಬರಲು ಮೂಲಕಾರಣವಾಯಿತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಚುನಾವಣೆ ಪ್ರಚಾರದಲ್ಲಿ ಜನತಾ ಪರಿವಾರವನ್ನು ತರಾಟೆಗೆ ತೆಗೆದುಕೊಂಡರು.
 

ವೆಬ್ದುನಿಯಾವನ್ನು ಓದಿ