ಮುಸ್ಲಿಮರು ಮತ್ತು ದಲಿತರೆಂದರೆ ನಿತೀಶ್, ಲಾಲುಗೆ ದ್ವೇಷ: ಪಪ್ಪು ಯಾದವ್

ಸೋಮವಾರ, 6 ಜುಲೈ 2015 (16:13 IST)
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್  ರಾಜ್ಯದ ದಲಿತರು ಮತ್ತು ಮುಸ್ಲಿಮರ ಜೊತೆ ವಿಷಕಾರಿ ಸಂಬಂಧ ಹೊಂದಿದ್ದಾರೆ ಎಂದು ಜನ ಕ್ರಾಂತಿ ಅಧಿಕಾರ್ ಮೋರ್ಚಾ (JKAM) ನಾಯಕ ಪಪ್ಪು ಯಾದವ್ ಆರೋಪಿಸಿದ್ದಾರೆ. 
"ಭಾಗಲ್ಪುರ್ ಗಲಭೆಯಲ್ಲಿ ಲಾಲು ಪ್ರಸಾದ್ ಮುಸ್ಲಿಮರನ್ನು ಗುರಿಯಾಗಿಸಿದರು ಎಂದು ಒತ್ತಿ ಹೇಳಿರುವ ಪಪ್ಪು ಯಾದವ್,  ಆರ್‌ಎಸ್ಎಸ್ ಅತಿ ಉತ್ತಮ ಸಂಸ್ಥೆ ಎಂದು ಲಾಲು ಪ್ರಸಾದ್ ಈ ಮೊದಲು ಹೇಳಿದ್ದರು. ಅಲ್ಲದೇ ಭಾಗಲ್ಪುರ್ ದಂಗೆಗೆ ಮುಸ್ಲಿಂ ಸಮುದಾಯದವರು ಕಾರಣ ಎಂದು ಅವರು ಅನೇಕ ಬಾರಿ ಲೋಕಸಭೆಯಲ್ಲಿ ಹೇಳಿದ್ದಾರೆ. ನಿತೀಶ್ ಹಲವು ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಸುರಿದಿದ್ದಾರೆ. ಆದರೆ ದಂಗೆಯಿಂದ ಪೀಡಿತ ಕುಟುಂಬಗಳಿಗೆ ಪರಿಹಾರ ಧನವನ್ನು ಘೋಷಿಸಲು ಮಾತ್ರ ಮುಂದಾಗಿಲ್ಲ", ಎಂದು ಆರೋಪಿಸಿದ್ದಾರೆ. 
 
"ಬಿಹಾರದಲ್ಲಿ ನಡೆದ ಎಲ್ಲ ದಂಗೆಗಳಿಗೆ ಲಾಲು ಯಾದವ್ ಮತ್ತು ನಿತೀಶ್ ಕುಮಾರ್ ಅವರೇ ಕಾರಣ. ಮುಸ್ಲಿಮರು ಮತ್ತು ದಲಿತರೆಂದರೆ ಅವರು ವಿಷಕಾರುತ್ತಾರೆ. ಅವರು ಹಿಂದುಳಿದ ವರ್ಗಗಳ ದೊಡ್ಡ ಶತ್ರುಗಳು.  ಅವರಿಬ್ಬರ ವಿರುದ್ಧ ತನಿಖೆ ನಡೆಸುವಂತೆ ನಾನು ಒತ್ತಾಯ ಮಾಡುತ್ತಿದ್ದೇನೆ.  ಸಿಬಿಐ ತತ್‌ಕ್ಷಣ  ಈ ಪ್ರಕರಣದ ಕುರಿತು ತನಿಖೆಯನ್ನು ಆರಂಭಿಸಬೇಕು", ಎಂದು ಅವರು ಆಗ್ರಹಿಸಿದ್ದಾರೆ. 
 
ತಾನು ಅಧಿಕಾರಕ್ಕೆ ಬಂದಾಗ  ದಂಗೆಯ ಬಲಿಪಶು ಕುಟುಂಬಗಳಿಗೆ ಪರಹಾರ ಧನವನ್ನು ನೀಡುವುದಾಗಿ ಉಚ್ಚಾಟಿತ ಆರ್‌ಜೆಡಿ ಸದಸ್ಯ ಪಪ್ಪು ಯಾದವ್ ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ