ಜಿಡಿಪಿ, ಸೆನ್ಸೆಕ್ಸ್ ಕುಸಿತದಿಂದ ಮೋದಿ ವಿಚಲಿತರಾಗಿದ್ದಾರೆ: ನಿತೀಶ್ ಕುಮಾರ್

ಮಂಗಳವಾರ, 1 ಸೆಪ್ಟಂಬರ್ 2015 (20:50 IST)
ಬಿಹಾರ್ ರಾಜ್ಯಕ್ಕೆ ವಿಶೇಷ ಪ್ಯಾಕೇಜ್‌ ಕುರಿತಂತೆ ಮೋದಿ ನೀಡಿರುವ ಹೇಳಿಕೆಯ ಬಗ್ಗೆ ವಾಗ್ದಾಳಿ ನಡೆಸಿದ ಬಿಹಾರ್ ಸಿಎಂ ನಿತೀಶ್ ಕುಮಾರ್, ತಮ್ಮ ಅಧಿಕಾರವಧಿಯಲ್ಲಿ ಜಿಡಿಪಿ ಮತ್ತು ಸೆನ್ಸೆಕ್ಸ್ ಕುಸಿತದಿಂದ ಆತಂಕಗೊಂಡು ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ರಾಜ್ಯದ ಅಂತರಿಕ ಮೂಲಗಳಿಂದ ಬಂದ ಹಣವನ್ನು ಹಣಕಾಸು ಆಯೋಗದಿಂದ ರಾಜ್ಯಗಳಿಗೆ ನೀಡಿದ ಆರ್ಥಿಕ ಅನುದಾನವನ್ನು ಕೇಂದ್ರ ಸರಕಾರ ನಿಲ್ಲಿಸಲು ಸಾಧ್ಯವೆ?  ಇಂತಹ ಕೀಳು ಹೇಳಿಕೆಯನ್ನು ಪ್ರಧಾನಿಯಿಂದ ಹೇಗೆ ನಿರೀಕ್ಷಿಸಲು ಸಾಧ್ಯವೇ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
 
ಕೇಂದ್ರ ಸರಕಾರದ ಅಡಳಿತದಲ್ಲಿ ಜಿಡಿಪಿ ಮತ್ತು ಸೆನ್ಸೆಕ್ಸ್ ಕುಸಿಯುತ್ತಿದೆ. ಆದ್ದರಿಂದ ಮೋದಿ ವಿಚಲಿತರಾಗಿದ್ದಾರೆ. ಇಲ್ಲವಾದಲ್ಲಿ ಪ್ರಧಾನಿ ಮೋದಿ ಇಂತಹ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.  
 
ಸರಕಾರದ 2.7 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್‌ ಬಗ್ಗೆ ಜನತೆಯ ದಾರಿ ತಪ್ಪಿಸಿ ನಿತೀಶ್ ವಂಚಿಸುತ್ತಿದ್ದಾರೆ. ರಾಜ್ಯಗಳ ವಾರ್ಷಿಕ ಬಜೆಟ್‌ 50 ರಿಂದ 50 ಸಾವಿರ ಕೋಟಿ ರೂಪಾಯಿಗಳಾಗಿದ್ದಲ್ಲಿ ಐದು ವರ್ಷಗಳ ಅವಧಿಗೆ 2.7 ಲಕ್ಷ ಕೋಟಿ ರೂಪಾಯಿಗಳಾಗುತ್ತವೆ ಎಂದು ಬಾಗಲ್ಪುರ್‌ನಲ್ಲಿ ಮೋದಿ ಬಿಹಾರ್ ಸಿಎಂ ನಿತೀಶ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಸರಕಾರ 1.25 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದೆ. ಒಟ್ಟು ಕೇಂದ್ರದಿಂದ 3.75 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ನೆರವು ದೊರೆಯಲಿದೆ. ಆದರೆ, ನಿತೀಶ್ ಕೇವಲ 2.7 ಲಕ್ಷ ಕೋಟಿ ರೂಪಾಯಿಗಳ ಬಗ್ಗೆ ಮಾತನಾಡುತ್ತಾರೆ. ಉಳಿದ 1.76 ಲಕ್ಷ ಕೋಟಿ ರೂಪಾಯಿಗಳು ಮೇವು ಹಗರಣದಂತೆ ಭ್ರಷ್ಟಾಚಾರದಲ್ಲಿ ಮುಳಗಲಿವೆಯೇ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ