ಹೆಣ್ಣು ಭ್ರೂಣಹತ್ಯೆಗಿಂತ ಘೋರ ಪಾಪವಿಲ್ಲ : ನರೇಂದ್ರ ಮೋದಿ

ಶನಿವಾರ, 27 ಡಿಸೆಂಬರ್ 2014 (16:16 IST)
ದೇಶದಲ್ಲಿ ಚಾಲ್ತಿಯಲ್ಲಿರುವ ಹೆಣ್ಣು ಭ್ರೂಣಹತ್ಯೆಯನ್ನು ಪ್ರಖರವಾಗಿ ಕಂಡಿಸಿರುವ ಪ್ರಧಾನಿ ಮೋದಿ. ಇದಕ್ಕಿಂತ "ದೊಡ್ಡ ಪಾಪ ಮತ್ತೊಂದಿಲ್ಲ" ಎಂದು ಹೇಳಿದ್ದಾರೆ. ಅಲ್ಲದೇ ಈ ಪಿಡುಗನ್ನು ಬುಡ ಸಮೇತ ಕಿತ್ತು ಹಾಕಲು ಕಲೆ ಮತ್ತು ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಜನರ ಸಹಾಯವನ್ನು ಅಪೇಕ್ಷಿಸಿದ್ದಾರೆ. 
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ 'ಉತ್ತಮ ಆಡಳಿತ ದಿನ' ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ರಾಣಿ ಲಕ್ಷ್ಮಿಬಾಯಿಗೆ ಜನ್ಮ ನೀಡಿದ ಹೆಗ್ಗಳಿಕೆ ಹೊಂದಿರುವ ದೇಶದಲ್ಲಿ, ಹೆಣ್ಣು ಭ್ರೂಣಹತ್ಯೆ ಪಿಡುಗು ರೂಢಿಯಲ್ಲಿದೆ. ಇದನ್ನು ಮೀರಿದ ದೊಡ್ಡ ಪಾಪ ಇಲ್ಲ, ಎಂದು  ಹೇಳಿದರು. 
 
'ಬೇಟಿ-ಬಚಾವೊ' ಅಭಿಯಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಅನಿಷ್ಠ ಪದ್ಧತಿಯನ್ನು ತಡೆಗಟ್ಟಲು ಎಲ್ಲೆಡೆ ಸಂದೇಶವನ್ನು ಸಾರಬೇಕಿದೆ ಎಂದರು. 
 
ಈ ದಿಕ್ಕಿನಲ್ಲಿ ಯಶ ಸಾಧಿಸಲು  ಕಲೆ ಮತ್ತು ಸಂಸ್ಕೃತಿಯಲ್ಲಿ ಗುರುತಿಸಿಕೊಂಡ ಜನರ ಪಾತ್ರ ಮಹತ್ತರವಾದುದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರನ್ನು ಜಾಗೃತಿಗೊಳಿಸುವಲ್ಲಿ ಕಲಾವಿದರ, ಸಾಹಿತಿಗಳ ಪಾತ್ರ ಮಹತ್ತರವಾದುದು. ಅದೇ ರೀತಿಯ ಕಾರ್ಯ ಈಗ ನಡೆಯಬೇಕಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.  
 
ಸ್ವಚ್ಛತೆ ಬಗ್ಗೆ ಸಂದೇಶ ಜೊತೆಗೆ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿಷಯವನ್ನಾಧರಿಸಿದ ಕವಿ ಸಮ್ಮೇಳನವನ್ನು  ಹಮ್ಮಿಕೊಳ್ಳುವ ಕುರಿತು ಅವರು ಸಲಹೆ ನೀಡಿದರು. 

ವೆಬ್ದುನಿಯಾವನ್ನು ಓದಿ