ಉರಿ ದಾಳಿಯ ಬಳಿಕ ಪಾಕ್ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಪಾಕಿಸ್ತಾನ ಕಲಾವಿದರ ಮೇಲೆ ನಿಷೇಧ ಹೇರುವುದಿಲ್ಲ. ಪ್ರಸ್ತುತ ವಾತಾವರಣ, ಸುರಕ್ಷತೆಯ ಪರಿಗಣನೆ ಮತ್ತು ಸ್ಥಳೀಯ ಸಂಘಟನೆಕಾರರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಸಂದರ್ಭದ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಪಾಕ್ ಭಾರತೀಯ ಟಿವಿ, ರೇಡಿಯೋಗಳ ಮೇಲೆ ನಿರ್ಬಂಧ ಹೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಸ್ವರೂಪ್, ಪಾಕಿಸ್ತಾನಕ್ಕೆ ಆತ್ಮವಿಶ್ವಾಸದ ಕೊರತೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಇದು ದುರದೃಷ್ಟಕರ ಬೆಳವಣಿಗೆ ಎಂದು ಹೇಳಿದ್ದಾರೆ.