ನವದೆಹಲಿ: ವಿಐಪಿಗಳು ಕಾರ್ಯಕ್ರಮಕ್ಕೆ ಆಗಮಿಸುವಾಗ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸುವುದು ನಮ್ಮಲ್ಲಿ ಸಾಮಾನ್ಯ. ಆದರೆ ಪ್ರಧಾನಿ ಮೋದಿಗೆ ಇನ್ನು ಮುಂದೆ ಹೂಗುಚ್ಛ ನೀಡಿ ಸ್ವಾಗತಿಸುವಂತಿಲ್ಲ.
ಹಾಗೆಂದು ಖುದ್ದು ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಪ್ರಧಾನಿ ಮೋದಿಯನ್ನು ಸ್ವಾಗಿತಿಸುವಾಗ ಹೂಗುಚ್ಛ ನೀಡಬೇಡಿ. ಅದರ ಬದಲಿಗೆ, ಪುಸ್ತಕ, ಖಾದಿ ವಸ್ತುಗಳು ಅಂತಹದ್ದೇನಾದರೂ ಕೊಡಬೇಕು ಎಂದು ಸುತ್ತೋಲೆಯಲ್ಲಿ ಖಡಕ್ ಆಗಿ ಸೂಚಿಸಲಾಗಿದೆ. ಪ್ರಧಾನಿ ಎಲ್ಲೇ ಹೋದರೂ ಈ ಪದ್ಧತಿಯನ್ನು ಅನುಸರಿಸಬೇಕು ಎಂದು ಗೃಹ ಖಾತೆ ರಾಜ್ಯ ಸಚಿವಾಲಯ ಸಂದೇಶ ನೀಡಿದೆ.
ಕೆಲವು ದಿನಗಳ ಹಿಂದೆ ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವಾಗತಿಸುವಾಗ ಹೂಗುಚ್ಛದ ಬದಲು ಪುಸ್ತಕ ಕೊಡಿ. ಯುವಕರಲ್ಲಿ ನಿರಂತರವಾಗಿ ಓದುವ ಹವ್ಯಾಸ ಬೆಳೆಸಬೇಕು ಎಂದಿದ್ದರು. ಅದರ ಪರಿಣಾಮವೇ ಈ ಸುತ್ತೋಲೆ.