ಇತ್ತೀಚೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಶಶಿಕಲಾ ಪದಗ್ರಹಣಕ್ಕೆ ಅನುವು ಮಾಡಿಕೊಟ್ಟಿದ್ದ ಪನ್ನೀರ್ ಸೆಲ್ವಂ ರಾತ್ರೋರಾತ್ರಿ ಬಂಡಾಯ ದ್ದಿರುವುದು ಶಶಿಕಲಾ ಪಾಳಯದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ, ಶತಾಯಗತಾಯ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವನ್ನ ಶಶಿಕಲಾ ಮುಂದುವರೆಸಿದ್ದಾರೆ.
ಪನ್ನೀರ್ ಸೆಲ್ವಂ ಬಂಡಾಯದ ಹಿನ್ನೆಲೆಯಲ್ಲಿ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಜಯಲಲಿತಾ ಬೆಂಬಲಿಗರು ರೆಸಾರ್ಟ್ ರಾಜಕಾರಣ ಶುರು ಮಾಡಿದ್ದಾರೆ. ಸುಮಾರು 134 ಶಾಸಕರನ್ನ ಖಾಸಗಿ ಬಸ್`ನಲ್ಲಿ ರೆಸಾರ್ಟ್`ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.