ಬಿಜೆಪಿಯ ಮೂವರು ನಾಯಕರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದ ಮೋದಿ ಸರಕಾರ

ಶುಕ್ರವಾರ, 31 ಜುಲೈ 2015 (15:34 IST)
ಕೇಂದ್ರ ಸರಕಾರ ಮತ್ತು ವಿಪಕ್ಷಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಸಂಸತ್ ಕಲಾಪ ಸುಗಮವಾಗಿ ಸಾಗುವಂತರ ರಾಜಕೀಯ ಪರಿಹಾರ ಕಂಡುಬರುತ್ತಿಲ್ಲ. ಇಂದು ಬೆಳಿಗ್ಗೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಎನ್‌ಡಿಎ ನಾಯಕರು ಕೇವಲ ಉಹಾಪೋಹಗಳ ವರದಿಗಳಿಂದಾಗಿ ಯಾರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.   
 
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಲೇಬೇಕು ಎನ್ನುವ ವಿಪಕ್ಷಗಳ ನಿಲುವಿನ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ, ಕೇಂದ್ರ ಸರಕಾರ ನಿಮ್ಮನ್ನು ಓಲೈಸಲು ಕಾರ್ಯನಿರ್ವಹಿಸುತ್ತಿಲ್ಲ. ಅಭಿವೃದ್ಧಿಗಾಗಿ ಕಾರ್ಯ.ನಿರ್ವಹಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
 
ಬಿಜೆಪಿಯ ಮೂವರು ನಾಯಕರು ರಾಜೀನಾಮೆ ನೀಡುವವರೆಗೆ ಚರ್ಚೆಯಿಲ್ಲ. ರಾಜೀನಾಮೆ ನೀಡಿ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ನೇತೃತ್ವ ವಿಪಕ್ಷಗಳು ಸಂಸತ್ತಿನಲ್ಲಿ ಘೋಷಣೆಗಳನ್ನು ಕೂಗಿದಾಗ, ನಕ್ವಿ ಮಾತನಾಡಿ, ಚರ್ಚೆಗೆ ನಾವು ಸಿದ್ದರಿದ್ದೇವೆ,.ಚರ್ಚೆಯಿಂದ ಪಾರಾಗಲು ಯತ್ನಿಸಬೇಡಿ. ಕೇವಲ ಪೊಳ್ಳು ವರದಿಗಳ ಆಧಾರದ ಮೇಲೆ ಯಾರು ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದರು.
 
ಕೇಂದ್ರ ಸರಕಾರ ಮತ್ತು ವಿಪಕ್ಷಗಳ ಸದಸ್ಯರ ಕೋಲಾಹಲ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಉಭಯ ಸದನಗಳನ್ನು ಮುಂದೂಡಲಾಯಿತು ಎಂದು ಸಂಸತ್ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ