3 ತಿಂಗಳಿಂದ ಸಂಬಳವಿಲ್ಲ: ಸರ್ಕಾರಕ್ಕೆ ವಿಮ್ಸ್ ಅಧೀಕ್ಷಕರ ಪತ್ರ

ಮಂಗಳವಾರ, 26 ಮೇ 2015 (13:14 IST)
ನಗರದ ವಿಮ್ಸ್ ಆಸ್ಪತ್ರೆಯಲ್ಲಿನ ಸಿಬ್ಬಂಧಿಗಳಿಗೆ ಕಳೆದ ಮೂರು ತಿಂಗಳಿನಿಂದಲೂ ಕೂಡ ಸರ್ಕಾರ ಸಂಬಳ ನೀಡಿಲ್ಲ ಎಂಬ ಸುದ್ದಿ ಪ್ರಸ್ತುತ ಸರ್ಕಾರದ ಕಾರ್ಯ ವೈಖರಿ ಮೇಲೆ ಪ್ರಭಾವ ಬೀರುತ್ತಿದ್ದು, ಆಸ್ಪತ್ರೆಯ ಅಧೀಕ್ಷಕರು ಸರ್ಕಾರಕ್ಕೆ ಪತ್ರ ಬರೆದು ಸಂಬಳ ನೀಡವಂತೆ ಮನವಿ ಮಾಡಿದ್ದಾರೆ.
 
ಈ ಸಂಬಂಧ ಆಸ್ಪತ್ರೆಯ ಅಧೀಕ್ಷಕರು ಸರ್ಕಾರಕ್ಕೆ ಪತ್ರ ಬರೆದಿದ್ದು, ಪತ್ರದಲ್ಲಿ ಸರ್ಕಾರ ಸಂಬಂಳ ನೀಡುವಲ್ಲಿ ಹೀಗೆ ವಿಳಂಬ ಅನುಸರಿಸಿದರೆ ನಾವು ಜೀವನ ನಡೆಸುವುದು ಹೇಗೆ ಸ್ವಾಮಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.  
 
ಆಸ್ಪತ್ರೆಯಲ್ಲಿ 250ಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ಇವರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವನ್ನು ಪಾವತಿಸಿಲ್ಲ. ಆದರೆ ಇವರಲ್ಲಿರುವ ಡಿ ದರ್ಜೆ ನೌಕರರಿಗೆ ಮಾತ್ರ 2 ತಿಂಗಳ ಸಂಬಂಳ ಪಾವತಿಸಲಾಗಿದೆ. ಆದರೆ ಅವರಿಗೂ ಒಂದು ತಿಂಗಳ ಸಂಬಳ ಬಾಕಿ ಇದೆ ಎಂದು ಹೇಳಲಾಗಿದೆ.    
 
ಈ ಸಂಬಂಧ ಸರ್ಕಾರಕ್ಕೆ ಹಲವು ಭಾರಿ ಮನವಿ ಸಲ್ಲಿಸಿದ್ದರೂ ಕೂಡ ಸರ್ಕಾರದ ಈ ವರ್ತನೆ ಕೊನೆಗೊಂಡಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 
 
ಸರ್ಕಾರವು ಈ ಆಸ್ಪತ್ರೆಯ ಸಿಬ್ಬಂಧಿಗಳಿಗೆ ತಿಂಗಳಿಗೆ ಒಟ್ಟು 3.50 ಕೋಟಿ ಪಾವತಿಸಬೇಕಿದ್ದು, ಮೂರು ತಿಂಗಳಿಗೆ ಒಟ್ಟು 10.50 ಕೋಟಿ ಬಿಡುಗಡೆ ಮಾಡಬೇಕಿದೆ. ಇನ್ನು ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಡಾ.ಶ್ರೀನಿವಾಸ್ ಕೂಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.  

ವೆಬ್ದುನಿಯಾವನ್ನು ಓದಿ